ಬುಧವಾರ ಮುಳುಗಡೆ ಸಂತ್ರಸ್ತರ ಸಭೆ
ಬಾಗಲಕೋಟೆ: ಇಲ್ಲಿನ ಕಿಲ್ಲಾದ ಗ್ರಾಮದೇವಿ ದೇವಸ್ಥಾನದ ಆವರಣದಲ್ಲಿ ಬಾಗಲಕೋಟೆ ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿಯಿಂದ ಜು.೩ ರಂದು ಸಂಜೆ ೫ಕ್ಕೆ ಸಭೆ ಹಮ್ಮಿಕೊಳ್ಳಲಾಗಿದೆ.
ಬಾಗಲಕೋಟೆ ನಗರದ ೫೨೧ ರಿಂದ ೫೨೩ ಮತ್ತು ೧೦೦ ಮೀಟರ್‌ವರೆಗೆ ಬಿಟಿಡಿಎಯಿಂದ ವಿವಿಧ ವಾರ್ಡ್ನಲ್ಲಿ ಪರಿಹಾರ ಹಣ ಹಾಗೂ ನಿವೇಶನವನ್ನು ಪಡೆದವರು ಕೂಡಲೇ ತಮ್ಮ ಮನೆಗಳನ್ನು ತೆರವುಗೊಳಿಸಲು ನೋಟಿಸ್ ನೀಡುತ್ತಿರುವ ಕಾರಣ ಈ ವಿಷಯದ ಬಗ್ಗೆ ಚರ್ಚಿಸಲು ಹಳೆ ನಗರದಲ್ಲಿ ಬರತಕ್ಕಂತಹ ವಾರ್ಡ್ಗಳ ನಗರ ಸಭೆ ಸದಸ್ಯರು ಹಿರಿಯರು ಸಭೆಗೆ ಆಗಮಿಸಿ ಸಲಹೆ ಸೂಚನೆಗಳನ್ನು ನೀಡಲು ವಿನಂತಿಸಲಾಗಿದೆ. ಹೋರಾಟ ಸಮಿತಿ ಅಧ್ಯಕ್ಷ ಸಂಗಯ್ಯ ಸರಗಣಾಚಾರಿ, ಕಾರ್ಯಾಧ್ಯಕ್ಷ ಸದಾನಂದ ನಾರಾ, ಉಪಾಧ್ಯಕ್ಷ ಗುಂಡುರಾವ ಶಿಂಧೆ, ಬಾಬು ಮುದ್ದೇಬಿಹಾಳ ಪದಾಧಿಕಾರಿಗಳಾದ ಮಹೇಶ ಕಮತಗಿ, ಸಾಗರ ಬಂಡಿ, ಸುರೇಶ ಮಜ್ಜಗಿ, ಬಸವರಾಜ ನಾಶಿ ಹಾಗೂ ಅಬ್ದುಲಸತಾರ್ ಮನಿಯಾರ್ ಸೇರಿ ಅನೇಕರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.