ನ್ಯಾಯಸಮ್ಮತ ಚುನಾವಣೆಗೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ: ಡಿಸಿ ಕೆ.ಎಂ.ಜಾನಕಿ 

ನ್ಯಾಯಸಮ್ಮತ ಚುನಾವಣೆಗೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ: ಡಿಸಿ ಕೆ.ಎಂ.ಜಾನಕಿ 
ಬಾಗಲಕೋಟೆ: ಲೋಕಸಭೆ ಸಾರ್ವತ್ರಿಕ ಚುನಾವಣೆಯನ್ನು ನ್ಯಾಯಸಮ್ಮತವಾಗಿ ನಡೆಸುವ ನಿಟ್ಟಿನಲ್ಲಿ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಕೆ.ಎಂ. ಜಾನಕಿ ತಿಳಿಸಿದ್ದಾರೆ. 
ಶನಿವಾರ ಸಂಜೆ ಜಿಲ್ಲಾಡಳಿತ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುಆವಣೆಗೆ ಏ.೧೨ರಂದು ಅಧೀಸೂಚನೆ ಹೊರಬೀಳಲಿದೆ. ಏ.೧೯ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಏ.೨೦ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಏ.೨೨ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಮೇ ೭ರಂದು ಮತದಾನ , ಜೂನ್ ೪ರಂದು ಮತ ಎಣಿಕೆ ಹಾಗೂ ಜೂನ್ ೬ರಂದು ನೀತಿ ಸಂಹಿತೆ ಮುಕ್ತಾಯವಾಗಲಿದೆ ಎಂದು ಹೇಳಿದರು. 
ರಾಜಕೀಯ ಪಕ್ಷಗಳು ಸಮಾವೇಶ, ಬೈಕ್ ರ‍್ಯಾಲಿ, ಪ್ರಚಾರ ಕಾರ್ಯಗಳ ಅನುಮತಿಯನ್ನು ಪಡೆಯಲು ಕಡ್ಡಾಯವಾಗಿ ಸುವಿಧಾ ತಂತ್ರಾAಶವನ್ನು ಬಳಸಬೇಕು. ಈ ಬಾರಿ ಎಲ್ಲವನ್ನೂ ಆಪ್ ಮೂಲಕವೇ ನಿರ್ವಹಿಸಲು ಚುನಾವಣಾ ಆಯೋಗ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದ್ದು, ಆಪ್ ಕೂಡ ಅಪ್ಡೇಟ್ ಆಗಿದೆ ಎಂದು ವಿವರಿಸಿದರು. 
ಸಾರ್ವಜನಿಕರು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಸಂಬAಧಿಸಿದAತೆ ತಮ್ಮ ಗಮನಕ್ಕೆ ಬಂದಲ್ಲಿ ಸಿವಿಜಿಲ್ ಆಪ್ ಮೂಲಕ ದೂರು ಸಲ್ಲಿಸಬಹುದಾಗಿರುತ್ತದೆ. ಅದನ್ನು ತಕ್ಷಣವೇ ಅಧಿಕಾರಿಗಳು ಗಮನಿಸಿ ಸ್ಪಂದಿಸಲಿದ್ದಾರೆ. ಜಿಲ್ಲಾಡಳಿತ ಭವನದಲ್ಲಿ ಚುನಾವಣಾ ಕಾರ್ಯಗಳ ಮೇಲೆ ನಿಗಾರ ಇರಿಸಲು ಮಾನಿಟರಿಂಗ್ ಸೆಲ್ ಕೂಡ ಕಾರ್ಯಾರಂಭ ಮಾಡಿದೆ ಎಂದು ಮಾಹಿತಿ ನೀಡಿದರು.
ಜಿಪಂ ಸಿಇಒ ಶಶಿಧರ ಕುರೇರ, ಎಸ್ಪಿ ವೈ.ಅಮರನಾಥ ರೆಡ್ಡಿ, ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಯುಕೆಪಿ ಜಿಎಂ ರಮೇಶ ಕಳಸದ, ಎಸಿ ಸಂತೋಷ ಜಗಲಾಸರ್ ಉಪಸ್ಥಿತರಿದ್ದರು. 
ಲಕ್ಷ ಮೀರಿ ವಹಿವಾಟಿಗೆ ಬೇಕು ದಾಖಲೆ: 
ಜಿಪಂ ಸಿಇಒ ಶಶಿಧರ ಕುರೇರ ಅವರು ಮಾತನಾಡಿ, ಸಾರ್ವಜನಿಕರು ಬ್ಯಾಂಕ್‌ಗಳಲ್ಲಿ ಒಂದು ಲಕ್ಷ ಮೀರಿ ಹಣವ್ಯವಹಾರ ಮಾಡಿದರೂ ಅದಕ್ಕೆ ಪೂರಕ ದಾಖಲೆಗಳನ್ನು ನೀಡಬೇಕಾಗುತ್ತದೆ. ನಮಗೆ ನಿತ್ಯವೂ ಬ್ಯಾಂಕ್‌ಗಳಿAದ ಮಾಹಿತಿ ಲಭಿಸಲಿದ್ದು, ಅನುಮಾನ ಬಂದವರ ಹಣಕಾಸು ವಹಿವಾಟಿನ ಮೇಲೆ ನಿಗಾ ಇರಿಸಲಾಗುವುದು ಎಂದು ಹೇಳಿದರು. ಇನ್ನು ೫೦ ಸಾವಿರ ರೂ.ಗಳನ್ನು ಮೀರಿ ನಗದು ತೆಗೆದುಕೊಂಡು ಓಡಾಡುವವರು ಪೂರಕ ದಾಖಲೆಗಳನ್ನು ಸಹ ಹೊಂದಿರಬೇಕು. ಇಲ್ಲವಾದಲ್ಲಿ ಚೆಕ್‌ಪೋಸ್ಟ್ಗಳಲ್ಲಿ ಸಿಬ್ಬಂದಿ ವಶಕ್ಕೆ ಪಡೆಯಲಿದ್ದಾರೆ ಎಂದು ತಿಳಿಸಿದರು. ಚುನಾವಣಾ ಕಾರ್ಯಕ್ಕೆ ಬಳಕೆ ಆಗುವ ವಾಹನಗಳಿಗೆ ಅನುಮತಿ ಪಡೆದಿರುಬೇಕು. ವಾಹನ ಗಾತ್ರಕ್ಕೆ ತಕ್ಕಂತೆ ಮಾತ್ರವೇ ಧ್ವಜ, ಸ್ಟಿಕ್ಕರ್‌ಗಳು ಇರಬೇಕು. ವಾಹನಗಳನ್ನು ಮಾಡಿಫಿಕೇಶನ್ ಮಾಡಿಸುವುದಾದರೆ ಮೋಟರ್ ವೆಹಿಕಲ್ ಕಾಯ್ದೆ ಅನುಸಾರ ಅನುಮತಿ ಪಡೆದಿರಬೇಕಲ್ಲದೇ ರಾಜ್ಯ ಚುನಾವಣಾ ಆಯೋಗದಿಂದಲೂ ಅನುಮತಿ ಇರಬೇಕು. ಇಲ್ಲವಾದಲ್ಲಿ ಕ್ರಮಕೈಗೊಳ್ಳಲಾಗುತ್ತದೆ ಎಂದು ವಿವರಿಸಿದರು. 
ಟಿವಿ, ಸಾಮಾಜಿಕ ಜಾಲತಾಣಕ್ಕೆ ಅನುಮತಿ ಕಡ್ಡಾಯ: 
ಟಿವಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವ ಜಾಹೀರಾತುಗಳಿಗೆ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಮುದ್ರಣ ಮಾಧ್ಯಮದಲ್ಲಿ ಪ್ರಕಟವಾಗುವ ಜಾಹೀರಾತಿಗೆ ಅನುಮತಿ ಅಗತ್ಯವಿರುವುದಿಲ್ಲ ಆದರೆ ಪ್ರಕಟಗೊಂಡ ಜಾಹೀರಾತಿನ ವೆಚ್ಚವನ್ನು ಅಭ್ಯರ್ಥಿ ವೆಚ್ಚದಲ್ಲಿ ಪರಿಗಣಿಸಲಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವುದಾದರೆ ಅನುಮತಿ ಕಡ್ಡಾಯವಾಗಿರುತ್ತದೆ ಎಂದು ಶಶಿಧರ ಕುರೇರ ಹೇಳಿದರು. 
ಖರ್ಚು ವೆಚ್ಚದ ಮೇಲೆ ನಿಗಾ: 
ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಮಾದರಿ ನೀತಿ ಸಂಹಿತೆ ಪಾಲನೆಗೆ ಜಿಲ್ಲೆಯಲ್ಲಿ ೧೩೬ ಸೆಕ್ಟರ ಅಧಿಕಾರಿಗಳು, ೬೦ ಪ್ಲೆöÊಯಿಂಗ್ ಸ್ಕಾ÷್ವಡ್, ೭೨ ಸ್ಟಾö್ಯಟಿಕ್ ಸರ್ವೇಲನ್ಸ್ ತಂಡ, ೨೨ ವಿಡಿಯೋ ಸರ್ವೆಲೆನ್ಸ್ ತಂಡ, ೭ ವಿಡಿಯೋ ವೀವಿಂಗ್ ತಂಡ ಹಾಗೂ ೨೪ ಚೆಕ್‌ಪೋಸ್ಟಗಳನ್ನು ರಚಿಸಲಾಗಿದೆ. ಚುನಾವಣಾ ಅಭ್ಯರ್ಥಿಗಳು ಒಟ್ಟು ೯೫ ಲಕ್ಷದವರೆಗೆ ಅಧಿಕೃತವಾಗಿ ಖರ್ಚು ಮಾಡಲು ಚುನಾವಣಾ ಆಯೋಗ ಕಲ್ಪಸಿದೆ ಎಂದು ಕೆ.ಎಂ.ಜಾನಕಿ ಮಾಹಿತಿ ನೀಡಿದರು.
 ಮತಗಟ್ಟೆ ವಿವರ: 
ಜಿಲ್ಲೆಯಲ್ಲಿ ೧೭೨೬ ಮತಗಟ್ಟೆಗಳಿಗೆ ಸಂಬAಧಿಸಿದAದೆ ಶೇ.೧೨೦ ಸಿಬ್ಬಂದಿಯನ್ನು ನೇಮಿಸಬೇಕಿದೆ. ಜಿಲ್ಲೆಯಲ್ಲಿ ಒಟ್ಟು ಇರುವ ೧೯೧೬೪ ಅಧಿಕಾರಿ/ ಸಿಬ್ಬಂದಿಗಳಿದ್ದು ಈ ಪೈಕಿ ೮೨೮೪ ಜನರನ್ನು ಚುನಾವಣಾ ಕಾರ್ಯಗಳಿಗೆ ಬಳಸಲಾಗುವುದು ಎಂದು ಕೆ.ಎಂ.ಜಾನಕಿ ಅವರು ಮಾಹಿತಿ ನೀಡಿದರು. 
ಹೋಳಿ ಕಾರ್ಯಗಳ ಬಗ್ಗೆ ಪರಿಶೀಲನೆ: 
ನೀತಿ ಸಂಹಿತೆ ಮಧ್ಯದಲ್ಲೇ ಐತಿಹಾಸಿಕ ಬಾಗಲಕೋಟೆ ಹೋಳಿ ಹುಣಿಮೆ ಆಚರಣೆ ಆಗುತ್ತಿದ್ದು, ನಿತ್ಯವೂ ನಡೆಯುವ ಹಲಗೆ ಮಜಲು ಕಾರ್ಯಕ್ರಮಗಳಿಗೆ ಅನುಮತಿ, ಅವುಗಳ ಮೇಲೆ ನಿಗಾ ಇರಿಸುವ ಸಂಬAಧ ಸ್ಪಷ್ಟನೆ ಪಡೆದು ನಿಯಮಗಳನ್ನು ರೂಪಿಸಲಾಗುತ್ತದೆ. ಧಾರ್ಮಿಕ ಆಚರಣೆಗಳಲ್ಲಿ ಹಸ್ತಕ್ಷೇಪ ಇರುವುದಿಲ್ಲವಾದರೂ ರಾಜಕೀಯ ಪಕ್ಷಗಳು ಸಂದರ್ಭ ಬಳಸಿಕೊಂಡು ಮತದಾರರ ಮೇಲೆ ಪ್ರಭಾವ ಬೀರಲು ಮುಂದಾಗಬಹುದು ಈ ಬಗ್ಗೆ ಚರ್ಚಿಸಿ ತೀರ್ಮಾನಕೈಗೊಳ್ಳಲಾಗುವುದು ಎಂದು ಹೇಳಿದರು. 
ಮತದಾರರ ವಿವರ
ನರಗುಂದ ಮತಕ್ಷೇತ್ರ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು ೧೭,೮೧,೩೯೫ ಮತದಾರರಿದ್ದು, ೮೮೩೯೯೩ ಪುರುಷ, ೮೯೭೩೦೬ ಮಹಿಳಾ ಹಾಗೂ ೯೬ ಇತರೆ ಮತದಾರರು ಇದ್ದಾರೆ. ಮುಧೋಳ ಮೀಸಲು ಮತಕ್ಷೇತ್ರದಲ್ಲಿ ೧೦೦೫೧೭ ಪುರುಷ, ೧೦೫೨೫೭ ಮಹಿಳಾ ಮತದಾರರು, ೬ ಇತರೆ ಸೇರಿ ಒಟ್ಟು ೨,೦೫,೭೮೦ ಮತದಾರರಿದ್ದರೆ, ತೇರದಾಳ ಕ್ಷೇತ್ರದಲ್ಲಿ ೧೧೫೬೫೫ ಪುರುಷ, ೧೧೭೦೦೩ ಮಹಿಳಾ, ೧೩ ಇತರೆ ಸೇರಿ ಒಟ್ಟು ೨೩೨೬೭೧, ಜಮಖಂಡಿ ಮತಕ್ಷೇತ್ರದಲ್ಲಿ ೧೦೯೧೧೭ ಪುರುಷ, ೧೧೧೦೧೪ ಮಹಿಳಾ, ೭ ಇತರೆ ಸೇರಿ ಒಟ್ಟು ೨೨೦೧೩೮, ಇದ್ದಾರೆ. ಬೀಳಗಿ ಕ್ಷೇತ್ರದಲ್ಲಿ ೧೧೪೭೮೪ ಪುರುಷ, ೧೧೮೦೯೪ ಮಹಿಳಾ, ೧೬ ಇತರೆ ಸೇರಿ ಒಟ್ಟು ೨೩೨೮೯೪, ಬಾದಾಮಿ ಕ್ಷೇತ್ರದಲ್ಲಿ ೧೧೨೪೪೯ ಪುರುಷ, ೧೧೧೭೧೩ ಮಹಿಳಾ, ೧೪ ಇತರೆ ಸೇರಿ ಒಟ್ಟು ೨೨೪೧೭೬, ಬಾಗಲಕೋಟೆ ಕ್ಷೇತ್ರದಲ್ಲಿ ೧೨೩೨೭೬ ಪುರುಷ, ೧೨೬೦೮೯ ಮಹಿಳಾ, ೨೦ ಇತರೆ ಸೇರಿ ಒಟ್ಟು ೨೪೯೩೮೫, ಹುನಗುಂದ ಕ್ಷೇತ್ರದಲ್ಲಿ ೧೧೨೨೫೩ ಪುರುಷ, ೧೧೩೮೯೮ ಮಹಿಳಾ, ೧೩ ಇತರೆ ಸೇರಿ ಒಟ್ಟು ೨೨೬೧೬೪ ಹಾಗೂ ನರಗುಂದ ಮತಕ್ಷೇತ್ರದಲ್ಲಿ ೯೫೯೪೨ ಪುರುಷ, ೯೪೨೩೮ ಮಹಿಳಾ ಹಾಗೂ ೭ ಇತರೆ ಸೇರಿದಂತೆ ಒಟ್ಟು ೧೯೦೧೮೭ ಜನ ಮತದಾರರಿದ್ದಾರೆ.  ಈ ಪೈಕಿ ೨೩೮೩೫ ಪುರುಷ ಯುವ ಮತದಾರರು, ೨೦೮೬೮ ಮಹಿಳಾ ಯುವ ಮತದಾರರು, ೪ ಇತರೆ ಯುವ ಮತದಾರರು ಸೇರಿ ಒಟ್ಟು ೪೪೭೦೭ ಯುವ ಮತದಾರರು ಜಿಲ್ಲೆಯಲ್ಲಿದ್ದಾರೆ. ೩೭೬೪ ಪುರುಷ ಸೇವಾ ಮತದಾರರು,೯೫ ಮಹಿಳಾ ಸೇವಾ ಮತದಾರರು ಸೇರಿ ಜಿಲ್ಲೆಯಲ್ಲಿ ೩೮೫೯ ಸೇವಾ ಮತದಾರರಿದ್ದಾರೆ. 
ದೂರುಗಳಿಗಾಗಿ ಇಲ್ಲಿ ಸಂಪರ್ಕಿಸಿ
ಸಾರ್ವಜನಿಕರು ಚುನಾವಣಾ ನೀತಿ ಸಂಹಿತಿ ದೂರುಗಳಿಗೆ ಸಂಬAಧಿಸಿದAತೆ ಜಿಲ್ಲಾ ದೂರು ನಿರ್ವಹಣಾ ಕೇಂದ್ರದ ದೂರವಾಣಿ ಸಂಖ್ಯೆ ೧೯೫೦ಕ್ಕೆ ದೂರು ಸಲ್ಲಿಸಬಹುದಾಗಿದೆ. ಅಲ್ಲದೇ ವಿಧಾನಸಭಾ ವಾರು ದೂರು ದಾಖಲಿಸಲು ಈ ಕೆಳಕಂಡ ದೂರವಾಣಿ ಸಂಖ್ಯೆಗಳಿಗೆ ದೂರು ಸಲ್ಲಿಸಬಹುದಾಗಿದೆ. ಮುಧೋಳ ಮೀಸಲು ಕ್ಷೇಥ್ರ: ೦೮೩೫೦-೨೮೦೦೫೧, ತೇರದಾಳ-೦೮೩೫೩-೨೩೦೫೫೫, ಜಮಖಂಡಿ ೦೮೩೫೩-೨೨೦೦೨೩, ಬೀಳಗಿ ೦೮೪೨೫-೨೭೫೨೨೭, ಬಾದಾಮಿ ೦೮೩೫೭-೨೦೦೨೨೮, ಬಾಗಲಕೋಟೆ ೦೮೩೫೪-೨೩೫೩೭೪, ಹುನಗುಂದ ೦೮೩೫೧-೨೦೦೨೧೨, ನರಗುಂದ ೦೮೩೭೭-೨೪೫೨೪೩ ಸಂಪರ್ಕಿಸಬಹುದು.