ಬಾಗಲಕೋಟೆ:
ಹಾಲಿ ಸಂಸದ ಪಿ.ಸಿ.ಗದ್ದಿಗೌಡರ ಅವರ ಹೆಸರನ್ನು ಐದನೇ ಬಾರಿಗೆ ಘೋಷಿಸಿ ಅದಾಗಲೇ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರೆ ಇತ್ತ ಕಾಂಗ್ರೆಸ್‌ನಲ್ಲಿ ತೇಲಿ ಬರುತ್ತಿರುವ ಹೆಸರುಗಳು ಕಾರ್ಯಕರ್ತರನ್ನು ಗೊಂದಲಕ್ಕೆ ಸಿಲುಕಿಸುತ್ತಿವೆ.
ಕಾಂಗ್ರೆಸ್‌ನಿAದ ಈ ಮೊದಲು ವೀಣಾ ಕಾಶಪ್ಪನವರ, ಅಜಯಕುಮಾರ ಸರನಾಯಕ, ಆನಂದ ನ್ಯಾಮಗೌಡ, ರಕ್ಷಿತಾ ಈಟಿ ಸೇರಿದಂತೆ ಜಿಲ್ಲೆಯ ನಾಯಕರುಗಳ ಹೆಸರುಗಳು ಮುಂಚೂಣಿಯಲ್ಲಿದ್ದವು. ಆದರೆ ಗುರುವಾರದಿಂದ ದಿಢೀರ್ ಸಚಿವ ಶಿವಾನಂದ ಪಾಟೀಲರ ಪುತ್ರಿ ಸಂಯುಕ್ತಾ ಪಾಟೀಲರ ಹೆಸರು ಮುಂಚೂಣಿಗೆ ಬಂದಿರುವುದು ಜಿಲ್ಲೆಯ ಕಾರ್ಯಕರ್ತರಲ್ಲಿ ಅಚ್ಛರಿಗೆ ಕಾರಣವಾಗುವುದರ ಜತೆಗೆ ಗೊಂದಲಕ್ಕೂ ಎಡೆಮಾಡಿಕೊಟ್ಟಿದೆ.
ವಿಜಯಪುರ ಡಿಸಿಸಿ ಬ್ಯಾಂಕ್ ನಿರ್ದೇಶಕಿಯಾಗಿರುವ ಸಂಯುಕ್ತಾ ಪಾಟೀಲ ಸ್ಪರ್ಧೆ ಬಯಸಿ ಅರ್ಜಿಯನ್ನು ಸಲ್ಲಿಸಿರಲಿಲ್ಲ ಆದರೆ ದಿಢೀರ್ ಆ ಹೆಸರು ಹೈಕಮಾಂಡ್ ಅಂಗಳದಲ್ಲಿ ತೇಲಿ ಬಂದಿರುವುದು ಜತೆಗೆ ಸಚಿವ ಶಿವಾನಂದ ಪಾಟೀಲ ಅವರ ಕುಟುಂಬ ಬಾಗಲಕೋಟೆ ಜಿಲ್ಲೆಯಲ್ಲಿ ಕ್ರಿಯಾಶೀಲವಾಗಿರುವುದು ಕಾಂಗ್ರೆಸ್‌ನಲ್ಲಿ ಅಚ್ಛರಿ ಬೆಳವಣಿಗೆಗೆ ಸಾಕ್ಷಿಯಾಗಿದೆ.
ತಮ್ಮ ಪುತ್ರಿ ಸ್ಪರ್ಧೆಗೆ ಅರ್ಜಿ ಸಲ್ಲಿಸಿಲ್ಲ ಆದರೆ ಹೈಕಮಾಂಡ್ ತೀರ್ಮಾನಿಸಿದರೆ ಸ್ಪರ್ಧಿಸುತ್ತಾರೆ. ಕಾಂಗ್ರೆಸ್‌ನಿAದ ಯಾರಿಗೆ ಟಿಕೆಟ್ ಸಿಕ್ಕರೂ ಗೆಲ್ಲಿಸುವ ನಿಟ್ಟಿನಲ್ಲಿ ಶ್ರಮ ಹಾಕಲಾಗುವುದು ಎಂದು ಸಚಿವ ಪಾಟೀಲ ಹೇಳಿದ್ದಾರೆ.
ಈ ನಡುವೆ ಮಂದಹಾಸಭರಿತವಾಗಿದ್ದ ಸಂಯುಕ್ತಾ ಪಾಟೀಲ ಅವರು ಶಕ್ತಿದೇವತೆ ಸುಕ್ಷೇತ್ರ ಬನಶಂಕರಿದೇವಿ ದರ್ಶನ ಪಡೆದಿದ್ದು, ಅವರ ತಾಯಿ ಭಾಗಶ್ರೀ ಸಂಯುಕ್ತಾ ಅವರಿಗೆ ಜತೆಯಾದರು. ಸಂಯುಕ್ತ ಹೆಸರಿನ ಜತೆಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ ಹೆಸರು ಮುಂಚೂಣಿಯಲ್ಲಿದೆ. ಕಳೆದ ಬಾರಿ ಸ್ಪರ್ಧಿಸಿ ಪರಾಭವ ಕಂಡಿದ್ದ ವೀಣಾ ಕಾಶಪ್ಪನವರ ಸೋತ ನಂತರ ಮನೆಯಲ್ಲಿ ಕೂರದೆ ನಿರಂತರ ಪಕ್ಷ ಸಂಘಟನೆಯಲ್ಲಿ ತೊಡಗಿದ್ದರು. ಕಾಶಪ್ಪನವರ ಕುಟುಂಬ ಸಿಎಂ ಸಿದ್ದರಾಮಯ್ಯ ಅವರಿಗೆ ಅತ್ಯಾಪ್ತರಾಗಿದ್ದು, ಶತಾಯಗತಾಯ ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದಾರಾದರೂ ದಿನಕ್ಕೊಂದರAತೆ ತೇಲಿಬರುತ್ತಿರುವ ಹೆಸರುಗಳು ಅವರನ್ನು ಹಾಗೂ ಅವರ ಬೆಂಬಲಿಗರನ್ನು ಆತಂಕಕ್ಕೆ ದೂಡಿದೆ.