ಕೇಂದ್ರದ ಯೋಜನೆಗೆ ಜಿಲ್ಲೆಯ ೭ ಗ್ರಾಮಗಳ ಆಯ್ಕೆ: ಡಿಸಿ ಜಾನಕಿ
ಬಾಗಲಕೋಟೆ: ಪ್ರಧಾನಮಂತ್ರಿ ಜನಜಾತೀಯ ಉನ್ನತ ಗ್ರಾಮ ಅಭಿಯಾನಕ್ಕೆ ಜಿಲ್ಲೆಯ ೭ ಗ್ರಾಮಗಳನ್ನು ಕೇಂದ್ರ ಸರ್ಕಾರ ಆಯ್ಕೆ ಮಾಡಿದೆ ಎಂದು ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಘೋಷಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೇಶದ ೬೩ ಸಾವಿರ ಗ್ರಾಮಗಳಲ್ಲಿ ಹೊಸ ಯೋಜನೆ ಜಾರಿಗೊಳ್ಳಲಿದೆ. ಬುಡಕಟ್ಟು ಜನರು ಬಹುಸಂಖ್ಯಾತರಿರುವ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಅಭಿವೃದ್ಧಿಪಡಿಸಲಾಗುತ್ತದೆ. ಯೋಜನೆಗಾಗಿ ೭೯, ೧೫೬ ಕೋಟಿ ರೂ. ಮೀಸಲಿರಿಸಲಾಗಿದೆ. ೫ ಕೋಟಿಗಿಂತ ಹೆಚ್ಚಿನ ಬುಡಕಟ್ಟು ಜನರಿಗೆ ಯೋಜನೆಯಿಂದ ನೆರವು ದೊರೆಯಲಿದೆ. ಜಿಲ್ಲೆಯ ಪರ್ವತಿ, ಹಲಗಲಿ, ಹಾನಾಪೂರ ಎಸ್‌ಪಿ, ನರಸಾಪೂರ, ಆಡಗಲ್, ಹೂವಿನಹಳ್ಳಿö, ಮುರಡಿ ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ" ಎಂದು ಮಾಹಿತಿ ನೀಡಿದರು.
ಮುಂದಿನ ಐದು ವರ್ಷಗಳ ಅವಗೆ ಈ ಗ್ರಾಮಗಳ ಅಭಿವೃದ್ಧಿಗೆ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಕ್ರಿಯಾ ಯೋಜನೆ ರೂಪಿಸಲಾಗುತ್ತದೆ. ಮೂಲ ಸೌಕರ್ಯ, ನಾನಾ ಆರ್ಥಿಕ ನೆರವಿನ ಯೋಜನೆಗಳ ಬಗ್ಗೆ ಮಾಹಿತಿ, ಉತ್ತಮ ಶಿಕ್ಷಣ ವ್ಯವಸ್ಥೆö, ಆರೋಗ್ಯ ರಕ್ಷಣೆಗೆ ಅಗತ್ಯ ಸೌಲಭ್ಯ, ಸಮರ್ಪಕ ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಯೋಜನೆ ಬಗ್ಗೆ ಸಾಮಾಜಿಕ ಜಾಲತಾಣ ಸೇರಿದಂತೆ ವ್ಯಾಪಕವಾಗಿ ಪ್ರಚಾರ ಕೈಗೊಳ್ಳಲಾಗುತ್ತದೆಎಂದರು.
ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಉಪನಿರ್ದೇಶಕ ಸದಾಶಿವ ಬಡಿಗೇರ ಇದ್ದರು.