ಹೆಬ್ಬಳ್ಳಿ ಅಜ್ಜನವರ ನೇತೃತ್ವದಲ್ಲಿ ಮೊಹರಂ
ಬಾಗಲಕೋಟೆ: ಬಾದಾಮಿ ತಾಲೂಕಿನ ಹೆಬ್ಬಳ್ಳಿಯಲ್ಲಿ ಮೊಹರಂ ಹಬ್ಬದ ಪ್ರಯುಕ್ತ ಜು.೧೫ರಿಂದ ಮೂರು ದಿನಗಳ ಕಾಲ ಹೆಬ್ಬಳ್ಳಿ ಅಜ್ಜನವರ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಜು.೫ರಂದು ಸೋಮವಾರ ಗಂಧರಾತ್ರಿಯಿದ್ದು, ಪರತಗೌಡರ ಪಾಟೀಲ, ದೇವೇದ್ರಗೌಡ ಗದ್ದಿಗೌಡರ ಅವರ ಮನೆಯಿಂದ ಗಂಧ ಬರಲಿದೆ, ಜು.೧೬ರ ಮಂಗಳವಾರ ಕತ್ತಲರಾತ್ರಿ ನಿಮಿತ್ತ ದೇವರಿಗೆ ನೈವೇದ್ಯೆ, ದೀಪೋತ್ಸವ ಕಾರ್ಯಕ್ರಮ ಜರುಗಲಿದೆ. ಅಜ್ಜನವರಿಂದ ದೇವರ ನುಡಿ ಕೇಳುವುದು, ಹೆಜ್ಜೆಯ ಮಜಲು ರಿವಾಯತ ಪದ ಕಾರ್ಯಕ್ರಮ ಜರುಗಲಿದೆ. ಜು.೧೭ರಂದು ಸೂರ್ಯೋದಯದಿಂದ ಹೆಬ್ಬಳ್ಳಿ ಅಜ್ಜನವರು ಸಕಲ ಭಕ್ತರಿಗೆ ಹೇಳಿಕೆ ಹೇಳುವರು ಎಂದು ಪ್ರಕಟಣೆ ತಿಳಿಸಿದೆ. ಬಾದಾಮಿ, ಲಖಮಾಪುರ ರೈಲು ನಿಲ್ದಾಣ ಹಾಗೂ ಹೊಳೆ ಆಲೂರಿನಿಂದ ಹೆಬ್ಬಳಿ ಆಗಮಿಸಲು ಸಾರಿಗೆ ವ್ಯವಸ್ಥೆ ಇರುತ್ತದೆ ಎಂದು ತಿಳಿಸಲಾಗಿದೆ.