ಶ್ರದ್ಧಾ ಶಾಂತೇಶ ಮೇಲ್ನಾಡ ರಂಗ ಪ್ರವೇಶ: ಶನಿವಾರ ಕಲಾಭವನದಲ್ಲಿ ಅದ್ಧೂರಿ ಕಾರ್ಯಕ್ರಮ

ಮೇಲ್ನಾಡ ಕುಟುಂಬದ ಕುಡಿ ದಿವಂಗತ ಶಾಂತೇಶ ಮೇಲ್ನಾಡ ಅವರ ಪುತ್ರಿ ಶ್ರದ್ಧಾ ಮೇ ೨೧ ರಂದು ನವನಗರದ ಕಲಾಭವನದಲ್ಲಿ ನಡೆಯಲಿರುವ ವರ್ಣರಂಜಿತ ಕಾರ್ಯಕ್ರಮದಲ್ಲಿ ರಂಗಪ್ರವೇಶ ಮಾಡಲಿದ್ದಾರೆ.

ಶ್ರದ್ಧಾ ಶಾಂತೇಶ ಮೇಲ್ನಾಡ ರಂಗ ಪ್ರವೇಶ: ಶನಿವಾರ ಕಲಾಭವನದಲ್ಲಿ ಅದ್ಧೂರಿ ಕಾರ್ಯಕ್ರಮ

ನಾಡನುಡಿ ‌ನ್ಯೂಸ್
ಬಾಗಲಕೋಟೆ:
ವಿದ್ಯಾಗಿರಿಯ ನಟರಾಜ ಸಂಗೀತ ನೃತ್ಯ ನಿಕೇತನದ ವಿದ್ಯಾರ್ಥಿನಿ, ನಗರಸಭೆ ಮಾಜಿ ಸದಸ್ಯೆ ಮಾಲಾ ಶಾಂತೇಶ ಮೇಲ್ನಾಡ ಅವರ ಪುತ್ರಿ  ಶ್ರದ್ಧಾ ಮೇಲ್ನಾಡ ಅವರ ರಂಗ ಪ್ರವೇಶ ಕಾರ್ಯಕ್ರಮವು ಮೇ ೨೧ರ ಶನಿವಾರ ನವನಗರದ ಕಲಾಭವನದಲ್ಲಿ ನಡೆಯಲಿದೆ.

ಅಂದು ಸಂಜೆ ೪ ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ  ಶಿರಸಿಯ ನಾಟ್ಯಾಂಜಲಿ ನೃತ್ಯ ಕಲಾಕೇಂದ್ರ ಸಂಸ್ಥಾಪಕಿ ಡಾ.ಸಹನಾ ಭಟ್, ವಿಪ ಸದಸ್ಯರುಗಳಾಸ ಪಿ.ಎಚ್.ಪೂಜಾರ, ಎಚ್.ಆರ್.ನಿರಾಣಿ, ಕನ್ನಡ ಮತ್ತು ಸಂಸ್ಕೃತಿ‌ ಇಲಾಖೆ ಸಹಾಯಕ‌ ನಿರ್ದೇಶಕ ಕರ್ಣಕುಮಾರ ಅವರು‌ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, . ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಅಣ್ಣಾರಾಯ ಅಜಗೊಂಡ, ಪರಮೇಶ್ವರಿ‌ ಮುರನಾಳ, ಡಾ.ರಸೂಲ್ ಜೆ.ಮೋಮಿನ್ ಅವರು ಅತಿಥಿಗಳಾಗಿ ಆಗಮಿಸಲಿದ್ದಾರೆ. ಹಿರಿಯ ತಬಲಾ ವಾದಕ ಪಂಡಿತ ಆರ್.ಎಚ್.ಮೋರೆ ಅವರು ಅಧ್ಯಕ್ಷತೆ ವಹಿಸುವರು.

ನೃತ್ಯ ಪ್ರವೀಣೆ ವಿದ್ವಾನ್ ಶುಭದಾ ದೇಶಪಾಂಡೆ ಅವರ ಬಳಿ ನೃತ್ಯ ಅಭ್ಯಾಸ ಮಾಡಿರುವ ಕುಮಾರಿ ಶ್ರದ್ಧಾ ಭರತನಾಟ್ಯದಲ್ಲಿ ಪ್ರಾವೀಣ್ಯತೆ ಸಾಧಿಸುತ್ತಿದ್ದು, ಶನಿವಾರ ಕಲಾಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಅದ್ಧೂರಿಯಾಗಿ ರಂಗಪ್ರವೇಶ ಮಾಡಲಿದ್ದಾರೆ.

ಶ್ರದ್ಧಾ ಮೇಲ್ನಾಡ ಕುಟುಂಬ ಸಂಘ ಪರಿವಾರದ ಹಿನ್ನಲೆ ಹೊಂದಿದ್ದು ಶ್ರದ್ಧಾ ತಂದೆ ದಿವಂಗತ ಶಾಂತೇಶ ಮೇಲ್ನಾಡ ಸಮಾಜ‌ಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಶ್ರದ್ಧಾ ರಂಗ ಪ್ರವೇಶ ಇಡೀ ಕುಟುಂಬಕ್ಕೆ ಹೆಮ್ಮೆಯ ವಿಚಾರ ಎಂದು ಆಕೆಯ ಚಿಕ್ಕಪ್ಪ, ಸಾಮಾಜಿಕ ಕಾರ್ಯಕರ್ತ ಶಿವಕುಮಾರ ಮೇಲ್ನಾಡ ನಾಡನುಡಿಗೆ ತಿಳಿಸಿದ್ದಾರೆ.

ಅವರ ನೃತ್ಯ ಭಂಗಿಯ ಎಲ್ಲ ಚಿತ್ರಗಳು ಇಲ್ಲಿವೆ