ಕುಮಾರೇಶ್ವರ ಆಸ್ಪತ್ರೆಗೆ ಅತ್ಯಾಧುನಿಕ ಅಂಬ್ಯುಲೆನ್ಸ್ ಹಸ್ತಾಂತರ

ಕುಮಾರೇಶ್ವರ ಆಸ್ಪತ್ರೆಗೆ ಅತ್ಯಾಧುನಿಕ ಅಂಬ್ಯುಲೆನ್ಸ್ ಹಸ್ತಾಂತರ
ಕುಮಾರೇಶ್ವರ ಆಸ್ಪತ್ರೆಗೆ ಅತ್ಯಾಧುನಿಕ ಅಂಬ್ಯುಲೆನ್ಸ್ ಹಸ್ತಾಂತರ
ಬಾಗಲಕೋಟ- ನಗರದ ಬಿ.ವಿ.ವಿ.ಸಂಘದ ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆಗೆ ರತ್ನಾಕರ ಬ್ಯಾಂಕ್ ಲಿಮಿಟೆಡ್ ವತಿಯಿಂದ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯಡಿ (ಸಿ.ಎಸ್.ಆರ್) ೪೨ ಲಕ್ಷ ರೂಪಾಯಿ ಮೌಲ್ಯದ ಅತ್ಯಾಧುನಿಕ ಅಂಬ್ಯುಲೆನ್ಸ್ನ್ ಕೊಡುಗೆಯಾಗಿ ನೀಡಲಾಯಿತು.
ಶನಿವಾರ ಬಿ.ವಿ.ವಿ.ಸಂಘದ ಎಸ್.ನಿಜಲಿಂಗಪ್ಪ ಮೇಡಿಕಲ್ ಕಾಲೇಜಿನ ಆವರಣದಲ್ಲಿ ಆರ್.ಬಿ.ಎಲ್ ಬ್ಯಾಂಕ್ ಬೆಳಗಾಂವಿ ವಿಭಾಗೀಯ ಮುಖ್ಯಸ್ಥ ನಂಜುAಡಸ್ವಾಮಿ ಹಿರೇಮಠ ಅವರು ಅಂಬ್ಯುಲೆನ್ಸ್ ಕೀಯನ್ನು ಬಿ.ವಿ.ವಿ.ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಅವರಿಗೆ ಹಸ್ತಾಂತರಿಸಿದರು. 
'ಫೊರ್ಸ್ ಟ್ರಾವೆಲ್ಲರ್ ಅಂಬ್ಯುಲೆನ್ಸ್' ಎಂದು ಕರೆಯಲಾಗುವ ಈ ಅತ್ಯಾಧುನಿಕ ಅಂಬ್ಯುಲೆನ್ಸ್ 'ಫೋರ್ಸ್ ಡಬ್ಲು÷್ಯ.೩೩೫೦' ಮಾದರಿಯದ್ದಾಗಿದ್ದು ರೋಗಿಯ ಚಿಕಿತ್ಸೆಗೆ ಅಗತ್ಯವಾದ ಎಲ್ಲ ಸೌಲಭ್ಯಗಳನ್ನು ಒಳಗೊಂಡಿದೆ.
ಪ್ರಸ್ತುತ ಭಾರತದಲ್ಲಿ ಉಪಯೋಗಿಸಲ್ಪಡುತ್ತಿರುವ ಅಬ್ಯುಲೆನ್ಸ್ ವಾಹನಗಳಲ್ಲೇ ಈ ಅಂಬ್ಯುಲೆನ್ಸ್ ದೊಡ್ಡ ಗಾತ್ರದ ಮತ್ತು ಅತ್ಯಾಧುನಿಕವಾದ ಅಂಬ್ಯುಲೆನ್ಸ್ ಎಂದು ಹೇಳಲಾಗಿದೆ. ಪರಿಗಣಿಸಲ್ಪಟ್ಟಿದೆ. ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆಯಿರುವ ಈ ಅಂಬ್ಯುಲೆನ್ಸ್ ವಾಹನದಲ್ಲಿ ಅಮೆರಿಕಾ ದೇಶದಲ್ಲಿ ತಯಾರಿಸಲ್ಪಟ್ಟ ವೆಂಟಿಲೇಟರ್ ಅಳವಡಿಸಲಾಗಿದೆ. ಸೆಂಟ್ರಲ್ ಆಕ್ಸಿಜನ್ ವ್ಯವಸ್ಥೆ ಇದ್ದು ಇದರಲ್ಲಿ ಸಿಲಿಂಡರ್‌ಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಚಿಕಿತ್ಸೆಗೆ ಅಗತ್ಯವಾದ ಹೃದಯಕ್ಕೆ ಶಾಖ ಕೊಡುವ ಯಂತ್ರ, ಕೃತಕ ಉಸಿರಾಟ ಯಂತ್ರ, ಇನ್‌ಫ್ಯೂಜನ್ ಪಂಪ್, ಕಾರ್ಡಿಯಾಕ್ ಮಾನಿಟರ್, ಸಿ.ಪಿ.ಆರ್ ಕಿಟ್, ಇ.ಸಿ.ಜಿ ಯಂತ್ರ, ಇತ್ಯಾದಿ ಉಪಕರಣಗಳನ್ನು ಒಳಗೊಂಡಿದೆ. ಸ್ವಯಂ ಚಾಲಿತ ಸ್ಟೆçಚರ್, ಔಷಧ ಸಂಗ್ರಹಣೆಗಾಗಿ ರೆಫ್ರಿಜಿರೇಟರ್ ಮತ್ತು ಸ್ಪಾಟ್‌ಲೈಟ್ ವ್ಯವಸ್ಥೆ ಈ ಅಂಬ್ಯುಲೆನ್ಸ್ನ ವಿಶೇಷತೆಗಳಾಗಿವೆ. ನಿರಂತರ ವಿದ್ಯುತ್ ಪೂರೈಕೆಗಾಗಿ ಯು.ಪಿ.ಎಸ್ ಅಳವಡಿಸಲಾಗಿದೆ ಮತ್ತು ವೈದ್ಯರಿಗೆ ಪ್ರತ್ಯೇಕ ಕ್ಯಾಬಿನ್ ರಚಿಸಲಾಗಿದೆ. ಈ ಅಂಬ್ಯುಲೆನ್ಸ್ ವಾಹನದಲ್ಲಿ ತೀವ್ರನಿಗಾ ಘಟಕ  ಮತ್ತು ಸಣ್ಣ ಆಪರೇಷನ್ ಥೇಟರ್ ವ್ಯವಸ್ಥೆಗೊಳಿಸಲಾಗಿದ್ದು ಸಣ್ಣ ಪ್ರಮಾಣದ ಶಸ್ತçಚಿಕಿತ್ಸೆಗಳಿಗೆ ಅನುಕೂಲವಿದೆ. 
ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ.ಎಮ್.ಸಜ್ಜನ (ಬೇವೂರ), ಹಾಸ್ಟೆಲ್ ಕಮಿಟಿ ಕಾರ್ಯಾಧ್ಯಕ್ಷ ಕುಮಾರಸ್ವಾಮಿ ಹಿರೇಮಠ, ವಾಹನ ವಿಭಾಗದ ಸಂಯೋಜಕರು ಅಶೋಕ ರೇಣುಕಪ್ಪ, ಕಟ್ಟಡ ಸಮಿತಿ ಕಾರ್ಯಾಧ್ಯಕ್ಷ ಮಹೇಶ ಕಕರಡ್ಡಿ, ಆರ್.ಬಿ.ಎಲ್ ಬ್ಯಾಂಕ್‌ನ ಪ್ರಾದೇಶಿಕ ಮುಖ್ಯಸ್ಥ ಪ್ರಸಾದ ಬಾಸುತಕರ್, ಬಾಗಲಕೋಟ ಶಾಖಾ ಮ್ಯಾನೇಜರ್ ಪಂಢರಿ ದೇಶಪಾಂಡೆ, ಕೃಷಿ ಅಧಿಕಾರಿ ತೀರ್ಥರಾಜ ಕುಚನೂರೆ, ಮೆಡಿಕಲ್ ಕಾಲೇಜ್ ಪ್ರಾಚಾರ್ಯ ಡಾ.ಭುವನೇಶ್ವರಿ ಯಳಮಲಿ,  ವೈದ್ಯಕೀಯ ಅಧೀಕ್ಷಕ ಡಾ.ಶ್ರೀರಾಮ ಕೋರಾ, ವಿವಿಧ ವಿಭಾಗಗಳ ಮುಖ್ಯಸ್ಥರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.