ಮತಾಂತರಗೊಂಡವರಿಗೆ ಬೇಡ ಎಸ್ಸಿ ಮೀಸಲು...!
ಬೆಂಗಳೂರು:ಅನ್ಯಧರ್ಮಕ್ಕೆ ಮತಾಂತರಗೊಂಡವರಿಗೆ ಪರಿಶಿಷ್ಟ ಜಾತಿಯ ಮತಾಂತರ ನೀಡದಿರಲು ದಲಿತ ಸಂಘಟನೆಗಳು ಅಭಿಪ್ರಾಯ ಮಂಡಿಸಿವೆ.
ಪರಿಶಿಷ್ಟ ಜಾತಿಯ ವ್ಯಕ್ತಿಗಳು ಮತಾಂತರಗೊಂಡರೆ ಅವರಿಗೆ ಮೀಸಲಾತಿ ನೀಡಬೇಕೆ, ಬೇಡವೇ ಎಂಬುದನ್ನು ಅರಿಯಲು ಕೇಂದ್ರ ಸರ್ಕಾರ ರಚಿಸಿರುವ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಕೆ.ಜೆ.ಬಾಲಕೃಷ್ಣನ್ ನೇತೃತ್ವದ ಆಯೋಗ ಅಂಬೇಡ್ಕರ್ ಭವನದಲ್ಲಿ ನಡೆಸಿದ ಸಾರ್ವಜನಿಕ ಸಭೆಯಲ್ಲಿ ದಲಿತ ಸಂಘಟನೆಗಳು ಒಕ್ಕೊರಲಿನ ಅಭಿಪ್ರಾಯ ಮಂಡಿಸಿದವು.
ಮತಾಂತರಗೊಂಡ ಧರ್ಮದ ಅಡಿಯಲ್ಲಿ ಅವರು ಬೇಕಿದ್ದರೆ ಮೀಸಲಾತಿಯನ್ನು ಪಡೆದುಕೊಳ್ಳಲಿ ಆದರೆ ಮುಸ್ಲಿಂ, ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡು ದಲಿತ ಮೀಸಲು ಪಡೆಯುವುದಕ್ಕೆ ನಮ್ಮ ವಿರೋಧವಿದೆ ಎಂದು ಅನೇಕ ದಲಿತ ಸಂಘಟನೆ ಮುಖಂಡರು ಅಭಿಪ್ರಾಯ ಮಂಡಿಸಿದರು.
ಸಭೆಯಲ್ಲಿದ್ದ ಮತಾಂತರಗೊಂಡ ಕೆಲವರು ಮೀಸಲಾತಿ ಕಲ್ಪಿಸುವಂತೆ ಕೋರಿದರು.