ಬಾಗಲಕೋಟೆ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಿಬ್ಬಂದಿ
ಬಾಗಲಕೋಟೆ: ಚುನಾವಣಾ ಕರ್ತವ್ಯಕ್ಕಾಗಿ ಜಿಲ್ಲೆಗೆ ಆಗಮಿಸಿದ್ದ ಅನ್ಯ ಜಿಲ್ಲೆಯ ಪೊಲೀಸರನ್ನು ಬಾಗಲಕೋಟೆ ಪೊಲೀಸರು ಅತ್ಯಂತ ಗೌರವ ಪೂರ್ವಕವಾಗಿ ನಡೆಸಿಕೊಂಡಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ನಮ್ಮನ್ನು ಮನಿಷ್ಯರಂತೆ ಕಂಡು ಗೌರವಿಸಿದ ಬಾಗಲಕೋಟೆ ಜಿಲ್ಲೆ ಪೊಲೀಸರು ಇತರ ಜಿಲ್ಲೆಯ ಪೂಲೀಸರಿಗೆ ಸ್ಫೂರ್ತಿ ಆಗಲಿ ಎಂದು ಹಾಸನದ ತಾರೇಶಗೌಡ ಎಂಬ ಸಿಬ್ಬಂದಿ ಅಭಿಮಾನದ ನುಡಿಗಳನ್ನು ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ಎಸ್ಪಿ ವೈ.ಅಮರನಾಥ ರೆಡ್ಡಿ ನೇತೃತ್ವದಲ್ಲಿ ಚುನಾವಣಾ ಕರ್ತವ್ಯಕ್ಕೆ ಆಗಮಿಸಿದ್ದ ಹೊರ ಜಿಲ್ಲೆಯ ಪೊಲೀಸರೂ ಸೇರಿದಂತೆ ಜಿಲ್ಲೆಯ ಸಿಬ್ಬಂದಿಗೆ ಈ ಬಾರಿ ಚುನಾವಣಾ ಕಿಟ್ ನೀಡಲಾಗಿತ್ತು.
ಅದರಲ್ಲಿ ಸಿಬ್ಬಂದಿಗೆ ತಿನ್ನಲು ಬಿಸ್ಕತ್, ಶೇಂಗಾ ಚಿಕ್ಕಿ, ಚಾಕಲೇಟ್ಸ್, ಸಾಬೂನು, ಕೊಬ್ಬರಿ ಎಣ್ಣೆ, ಶಾಂಪೂ, ಬಾಚಣಿಕೆ ಸೇರಿ ಹಲವು ವಸ್ತುಗಳ ಪ್ಯಾಕೆಟ್ ನೀಡಲಾಗಿತ್ತು.
ಇದು ನೋಡಲು ಸಣ್ಣ ವಿಷಯ ಅನಿಸಿದರೂ ಸಾವಿರಾರು ಸಂಖ್ಗೆಯಲ್ಲಿ ಆಗಮಿಸಿದ್ದ ಪೊಲೀಸರಿಗೆ ತಲುಪಿದ್ದರಿಂದ ಅವರಿಗೆ ದೊಡ್ಡ ಮಟ್ಟದಲ್ಲಿ ನೆರವಾಗಿದೆ. ಇಂಥ ಸಣ್ಣ ಪ್ರಯತ್ನಗಳು ಸಿಬ್ಬಂದಿಯಲ್ಲಿ ಎಷ್ಟು ದೊಡ್ಡ ಮೆಚ್ಚುಗೆಗೆ ಕಾರಣವಾಗುತ್ತದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಇತರ ಜಿಲ್ಲೆ ಪೊಲೀಸರಿಗೂ ಇದು ಪ್ರೇರಣೆ ಆಗಬೇಕೆಂದು ತಾರೇಶಗೌಡ ಬರೆದುಕೊಂಡಿದ್ದಾರೆ.