ಬಾಗಲಕೋಟೆ: ಕೈ ನಾಯಕರಿಗೆ ತಿವಿದ ಕರವೇ
ಬಾಗಲಕೋಟೆ:ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಸಚಿವ ಶಿವಾನಂದ ಪಾಟೀಲ ಅವರ ಪುತ್ರಿ ಸಂಯುಕ್ತಾ ಹೆಸರು ಮುಂಚೂಣಿಗೆ ಬಂದಿರುವುದಕ್ಕೆ ಕರವೇ ಅಧ್ಯಕ್ಷ ಬಸವರಾಜ ಧರ್ಮಂತಿ ಸಿಡಿಮಿಡಿಗೊಂಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ಸ್ಥಳೀಯರು ಸ್ಪರ್ಧೆಗೆ ಅರ್ಹತೆ ಹೊಂದಿರುವಾಗ ಹೊರ ಜಿಲ್ಲೆ ಅವರಿಗೆ ಯಾಕೆ ಅವಕಾಶ ಎಂದು ಅವರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಬೇರೆ ಜಿಲ್ಲೆ ಅವರಿಗೆ ಟಿಕೆಟ್ ನೀಡುವುದು ಅವಮಾನಕರ ಸಂಗತಿ ಆಗಿದೆ ಈ ರೀತಿ ಜಿಲ್ಲೆ ಅನ್ಯಾಯ ಮಾಡುವ ಕೆಲಸ ಬೇಡ ಎಂದು ಅವರು ಕೈ ನಾಯಕರನ್ನು ತಿವಿದಿದ್ದಾರೆ.