ಭೀಕರ ರಸ್ತೆ ಅಪಘಾತ: ಸಿದ್ಧನಕೊಳದ ಶಿವಕುಮಾರ ಸ್ವಾಮೀಜಿಗೆ ಗಂಭೀರ ಗಾಯ

ಭೀಕರ ರಸ್ತೆ ಅಪಘಾತ: ಸಿದ್ಧನಕೊಳದ ಶಿವಕುಮಾರ ಸ್ವಾಮೀಜಿಗೆ ಗಂಭೀರ ಗಾಯ

ಬಾಗಲಕೋಟೆ: ಅಮಿನಗಡದ ಬಾಣಂತಿ ಕೊಳ್ಳದ ಬಳಿ ಸಂಭವಿಸಿತುವ ಭೀಕರ ಅಪಘಾತದಲ್ಲಿ ಸುಕ್ಷೇತ್ರ ಸಿದ್ಧನಕೊಳ್ಳದ ಡಾ.ಶಿವಕುಮಾರ ಸ್ವಾಮೀಜಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಸ್ಕಾರ್ಪಿಯೋ ವಾಹನ ಚಲಾಯಿಸುತ್ತಿದ್ದ ಸ್ವಾಮೀಜಿ ಹಿಂದಿನಿಂದ ಟಿಪ್ಪರ್ ಗೆ ಢಿಕ್ಕಿ ಹೊಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಸ್ವಾಮೀಜಿ ಅವರ ತಲೆ ಹಾಗೂ ಕಾಲಿಗೆ ತೀವ್ರ ಗಾಯಗಳಾಗಿದೆ. ಅಪಘಾತ ಸಂಭವಿಸುತ್ತಿದ್ದಂತೆ ಶ್ರೀಗಳನ್ನು ಚಿಕಿತ್ಸೆಗಾಗಿ  ಬಾಗಲಕೋಟೆ ‌ಜಿಲ್ಲಾಸ್ಪತ್ರಗೆ  ಕರೆತರಲಾಗಿದೆ. ಆದರೆ ತಲೆಗೆ ತೀವ್ರ ಗಾಯಗಳಾಗಿರುವುದರಿಂದ‌ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಕೆರೂಡಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಶ್ರೀಗಳ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ.