ಜಿಲ್ಲೆಗೆ ಅಗತ್ಯವಿರುವ ಅಭಿವೃದ್ಧಿ ಮಾಡಿದ ಆತ್ಮವಿಶ್ವಾಸ ನನಗಿದೆ: ಗದ್ದಿಗೌಡರ
ಜಿಲ್ಲೆಗೆ ಅಗತ್ಯವಿರುವ ಅಭಿವೃದ್ಧಿಗಳನ್ನು ಮಾಡಿದ ಆತ್ಮವಿಶ್ವಾಸ ನನಗಿದೆ: ಗದ್ದಿಗೌಡರ
ಬಾಗಲಕೋಟೆ: ಜಿಲ್ಲೆಗೆ ಅಗತ್ಯವಿರುವ ಅಭಿವೃದ್ಧಿ ಕಾರ್ಯಗಳನ್ನು ನನ್ನ ಅವದಿಯಲ್ಲಿ ನಾನು ಮಾಡಿದ್ದೆನೆ, ಜಿಲ್ಲೆಯ ಜನರಿಗೆ ಗೋತ್ತಿದೆ, ಮಾಡಿದ ಅಭಿವೃದ್ಧಿ ಕೆಲಸಗಳ ಬಗ್ಗೆ ನನಗೆ ಆತ್ಮವಿಶ್ವಾಸವಿದೆ ಆ ನಿಟ್ಟಿನಲ್ಲಿ ಮತ್ತೊಮ್ಮೆ ಚುನಾವಣೆಗೆ ಸ್ಪರ್ದಿಸಿರುವೆ ಮತದಾರರ ಆಶಿರ್ವಾದ ದಿಂದ ನಿಶ್ಚತವಾಗಿ ಗೆಲ್ಲುತ್ತೆನೆ ಎಂದು ಲೋಕಸಭಾ ಬಿಜೆಪಿ ಅಭ್ಯರ್ಥಿ ಹಾಗೂ ಸಂಸದರಾದ ಪಿ.ಸಿ.ಗದ್ದಿಗೌಡರ ಹೇಳಿದರು.
ಅವರು ರವಿವಾರ ಭಾರತೀಯ ಜನತಾ ಪಾರ್ಟಿ ಬಾಗಲಕೋಟೆ ಮತಕ್ಷೇತ್ರದಿಂದ ಹಮ್ಮಿಕೊಂಡ ಪಾದಯಾತ್ರೆ ಮೂಲಕ ಮನೆ ಮನೆಯ ಪ್ರಚಾರದಲ್ಲಿ ಭಾಗವಹಸಿ ಮತಯಾಚನೆ ಮಾಡಿ ಮಾತನಾಡಿದರು,
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತದಲ್ಲಿ ಸರ್ವ ಸಮುದಾಯಗಳಿಗೆ ಸಮಾನ ಯೋಜನೆಗಳನ್ನು ರೂಪಿಸಿ, ದೇಶದ ಸರ್ವಾಂಗಿಣ ಅಭಿವೃದ್ದಿ ಆಗುತ್ತಿದೆ, ಆ ನಿಟ್ಟಿನಲ್ಲಿ ಬಾಗಲಕೋಟೆ ಜಿಲ್ಲೆಗೆ ಅವಶ್ಯವಿರುವ ರಾಷ್ಟ್ರೀಯ ಹೆದ್ದಾರಿಗಳಾದ ಬಾನಾಪೂರ- ಗದ್ದನಕೇರಿ ಕ್ರಾಸ್ ರಾಷ್ಟ್ರೀಯ ಹೆದ್ದಾರಿ, ಬಾಡಗಂಡಿಯಿಂದ ನರಗುಂದ, ಮಲಪ್ರಭಾ ನದಿಗೆ ಕೋಣ್ಣುರ ಹತ್ತಿರ ಬ್ರೀಜ್, ನರಗಗುಂದ ವರವಲಯದ ಬೈಪಾಸ್ ರಸ್ತೆ ಸೇರಿದಂತೆ ಒಟ್ಟು ೨೦ ಕಾಮಗಾರಿಗಳು ೧೧೪ ಕೋಟಿ ರೂ ವೆಚ್ಚದಲ್ಲಿ ಎಲ್ಲ ಕಾಮಗಾರಿಗಳು ಪೂರ್ಣಗೊಂಡಿವೆ, ರೇಲ್ವೆ ಸಂಪರ್ಕ ಹಾಗೂ ಆಧುನಿಕ ರೈಲು ನಿಲ್ದಾಣಗಳು, ಬಾಗಲಕೋಟೆ ಕುಡಚಿಮಾರ್ಗ,ಗದಗ ಹುಟಗಿ ಮಾರ್ಗ, ಜಿಲ್ಲಾ ಕೇಂದ್ರದಲ್ಲಿ ೧೨.೪೫ ಕೋಟಿ ರೂ ವೆಚ್ಚದಲ್ಲಿ ನೂತನ ಅತ್ಯಾಧುನಿಕ ರೈಲ್ವೆ ನಿಲ್ದಾಣ ನಿರ್ಮಾಣ, ಮತ್ತು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಲ್ಲಿ ಮುಂಗಾರು ಹಂಗಾಮಿಗೆ ರೈತರಿಗೆ ರೂ,೮೪೭೫,೦೬ ಲಕ್ಷ ಪರಿಹಾರ ವಿತರಿಸಲಾಗಿದೆ ಇದರಲ್ಲಿ ೬೯.೮೨೨ ರೈತರು ಈ ಯೋಜನೆ ಪ್ರಯೋಜನ ಪಡೆದಿದ್ದಾರೆ, ಇನ್ನು ಹಿಂಗಾರು ಹಂಗಾಮಿಗೆ ರೂ,೧೦೯೮೦.೦೭ ಲಕ್ಷ ಪರಿಹಾರ ವಿತರಿಸಲಾಗಿದೆ,೫೭.೩೫೪ ರೈತರು ಪ್ರಯೋಜನ ಪಡೆದಿದ್ದಾರೆ,ಪ್ರಧಾನ ಮಂತ್ರಿ ಕಿಸಾನ ಸಮ್ಮಾನ ನಿಧಿ ಯೋಜನೆಯಲ್ಲಿ ೨೦೧೮-೧೯ ರಿಂದ ೨೦೨೦-೨೩ ವರೆಗೆ ೭.೭೧.೫೮೯ ರೈತರು ನೋಂದಾಯಿಸಿಕೊಂಡಿದ್ದಾರೆ, ಇವರಿಗೆ ಈ ಯೋಜನೆಯಡಿ ೪೪೬.೯೮ ಕೋಟಿ ರೂ ಮೊತ್ತ ರೂ,೬೦೦೦ ದಂತೆ ನಾಲ್ಕು ತಿಂಗಳಿಗೊಮ್ಮೆ ೩ ಕಂತುಗಳಲ್ಲಿ ಕೇಂದ್ರ ಸರಕಾರದಿಂದ ರೈತರ ಖಾತೆಗೆ ಜಮಾ ಆಗಿದೆ,ಹೃದಯ ಯೋಜನೆಯಡಿ ಚಾಲೂಕ್ಯರ ರಾಜದಾನಿ ಬದಾಮಿಗೆ ರೂ,೨೨.೬೦ ಕೋಟಿ ವೆಚ್ಚದಲ್ಲಿ ಬಾದಾಮಿ ನಗರದ ಸೌಂದರ್ಯಕರಣ ಅಭಿವೃದ್ಧಿ ಮಾಡಲಾಗಿದೆ, ಬಾಗಲಕೋಟೆ ಲೋಕಸಭಾ ವ್ಯಾಪ್ತಿಗೆ ಬರುವ ಬಾದಾಮಿ,ಪಟ್ಟದಕಲ್ಲು,ಐಹೊಳೆ, ಶಿವಯೋಗಮಂದಿರ, ಬನಶಂಕರಿ, ಹಳ್ಳೂರ,ಬೇವೂರ, ಚೊಳಚಗುಡ್ಡ,ಲಕ್ಕುಂಡಿ ಪಾರಂಪರಿಕ ತಾಣಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಹಾಗು ಅಭಿವೃದ್ಧಿ ಕಾಮಗಾರಿಗಳಿಗೆ ಕೇಂದ್ರ ಸರಕಾದ ಪುರಾತತ್ವ ಇಳಾಖೆಯಿಂದ ೧೩೩೩.೨೬ ಕೋಟೀ ಮಂಜುರಾಗಿದೆ,ನೇಕಾರರಿಗೆ ಮಾಸಿಕ ಸಹಾಧನ, ಕೈಮಗ್ಗ ನೇಕಾರರ ಮಕ್ಕಳಿಗೆ ಶಿಷ್ಯವೇತನ,ಇನ್ನು ಹತ್ತಾರು ಅಭಿವೃದ್ಧಿ ಕೆಲಸಗಳ ಜೋತಗೆ ಕೇಂದ್ರ ಅನೇಕ ಯೋಜನೆಗಳನ್ನು ಜನರಿಗೆ ತಲುಪಿಸಿದ್ದವೆ ಎಂದರು.
ಇದೆ ಸಂಧರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದಾಗ ನಮ್ಮೆ ಬಾಗಲಕೋಟೆ ಮತಕ್ಷೇತ್ರದಲ್ಲಿ 6000 ಸಾವಿರ ಕೋಟಿ ರೂ ವೆಚ್ಚದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿದ್ದು, ಇನ್ನ ಕೂಡಾ ಕೆಲವೂ ಕಾಮಗಾರಿ ನಡೆದಿದ್ದು ಎಲ್ಲವೂ ಜನರ ಕಣ್ಣಮುಂದೆ ಇದೆ, ಅಭಿವೃದ್ಧಿ ದೃಷ್ಟಿಯಿಂದ ಜನ ಬಿಜೆಪಿಯನ್ನು ಬೆಂಬಲಿಸಲಿದ್ದಾರೆ, ಇಂದು ವಿಶ್ವವೇ ಭಾರತವನ್ನು ತಿರುಗಿ ನೋಡುವಂತೆ ಮಾಡಿದ ಪ್ರಧಾನ ಮೋದಿಯವರನ್ನು ಜನ ಎಂದು ಮರೆಯುವದಿಲ್ಲಾ ಕೇಂದ್ರದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತಂದು ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡುತ್ತಾರೆ ಎಂದರು.
ಪಾದಯಾತ್ರೆಯಲ್ಲಿ ರಾಜ್ಯ ಸಭಾ ಸಸ್ಯ ನಾರಾಯಣಸಾ ಭಾಂಡಗೆ, ನಗರಸಭೆ ಸದಸ್ಯರಾದ ಶಶಿಕಲಾ ಮಜ್ಜಗಿ,ಸಾಗರ ಬಂಡಿ, ಈಶ್ವರ ಸುಗಂದಿ, ಸಂಗಣ್ಣತಿಮ್ಮಣ್ಣವರ, ರಾಮಣ್ಣ ಕಟ್ಟಿಮನಿ, ಅಶೋಕ ಕಲಾಲ, ದಶರಥ ಪತಂಗೆ, ಸವಿತಾ ಗಡ್ಡಿಮಠ, ವಿದ್ಯಾ ಅಕಸ್ತö್ಯ, ಶಂಕರ ತೇಲಕರ, ಬಸವರಾಜ ಬಡಿಗೇರ, ಸುನಿಲ ಯಾಳಗಿ, ಮಲ್ಲು ಬಾಳಪ್ಪನ್ನವರ,ದ್ಯಾನೇಶ್ವರ ಕಪಾಟೆ, ಮಂಜು ಏಳಮ್ಮಿ, ಬಸಪ್ಪ ಯಳ್ಳಿಗುತ್ತಿ, ಸಂಗಪ್ಪ ಕೊಪ್ಪದ, ಬಂಡೆಪ್ಪ ಏಳೆಮ್ಮಿ, ಮಲ್ಲಿಕಾರ್ಜುನ ಗಿರಗಾಂವಿ, ಸಂಕಣ್ಣ ಗಿರಗಾಂವಿ, ಮಹಾಂತೇಶ ಯಳ್ಳಿಗುತ್ತಿ, ಮಂಜು ಅಂಬಿಗೇರ, ರೇಣುಕಾ ಬಡಿಗೇರ, ಸಂಗಣ್ಣ ಹಡಗಲಿ, ಸುರೇಶ ಮಜ್ಜಗಿ, ಶ್ರೀಶೈಲ ಗಾಣಿಗೇರ,ಬಸು ಪುಜಾರಿ ಸೇರಿದಂತೆ ನಗರಸಭೇ ಸದಸ್ಯರು, ಜಿಲ್ಲಾ ಪದಾಧಿಕಾರಿಗಳು, ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.
ಗಜಾನನ ಚೌಕದಿಂದ ಪ್ರಾರಂಭವಾದ ಪಾದಯಾತ್ರೆ ನಗರದ ೫ ಮತ್ತು ೭ ನೇ ವಾರ್ಡಗಳಲ್ಲಿ ಸಂಚರಿಸಿ ಜೈನಪೇಟೆ,ಹಳಪೇಟೆ, ಕುಂಬಾರ ಮಡುವಿನಲ್ಲಿ ಪಾದಯಾತ್ರೆ ಮೂಲಕ ಮನೆ ಮನೆಗೆ ತೇರಳಿ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ಮಾಡಲಾಯಿತು.
ಅಂಬೇಡ್ಕರ ಪುತ್ಥಳಿಗೆ ಮಾಲಾರ್ಪಣೆ
ಪೊಟೋ ೧೦ ಡಾ.ಬಿ.ಆರ. ಅಂಬೇಡ್ಕರ ಜಯಂತಿ ನಿಮಿತ್ಯ ನಗರದಲ್ಲಿರುವ ಅಂಬೇಡ್ಕರ ಪುತ್ಥಳಿಗೆ ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ನಗರಸಭೇ ಸದಸ್ಯೆ ಜ್ಯೋತಿ ಭಜಂತ್ರಿ, ಯಲ್ಲಪ್ಪ ಬೇಂಡಿಗೇರಿ,ಶಿವಾನಂದ ಟವಳಿ,ರಾಜು ನಾಯ್ಕರ,ಕೇಶವ ಭಜಂತ್ರಿ,ಬಸವರಾಜ ಹುನಗುಂದ ಸೇರಿದಂತೆ ಅನೇಕರು ಇದ್ದರು.