ರೈತರ ಸಕ್ಕರೆ ಕಾರ್ಖಾನೆ ಆರಂಭಕ್ಕೆ ೪೦ಕೋಟಿ ರೂ

ರೈತರ ಸಕ್ಕರೆ ಕಾರ್ಖಾನೆ ಆರಂಭಕ್ಕೆ ೪೦ಕೋಟಿ ರೂ

ಮುಧೋಳ: 
ಕಳೆದ ಮೂರು ವರ್ಷಗಳಿಂದ ಸ್ಥಗಿತಗೊಂಡ ಕಾರ್ಖಾನೆಯ ಪುನರಾರಂಭಕ್ಕೆ ಸಂಬ0ದಪಟ್ಟ0ತೆ ನಾನು ನಿರಂತರ ಪ್ರಯತ್ನ ಮಾಡಿದರ ಫಲವಾಗಿ ಸರ್ಕಾರ ಈಗ ಕಾರ್ಖಾನೆಯ ಪುನರಾರಂಭಕ್ಕೆ ೪೦ ಕೋಟಿ ರೂ ಗ್ಯಾರಂಟಿ ಹಣ ನೀಡಲು ಒಪ್ಪಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು. 
 ಶನಿವಾರ ನಗರದ ತಾಲೂಕಾ ಆಡಳಿತ ಭವನದ ಎದರು ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಪುನರಾರಂಭಕ್ಕಾಗಿ ನಿನ್ನೆಯಿಂದ ನಡೆಯುತ್ತಿರುವ ಹೋರಾಟ ಸ್ಥಳಕ್ಕೆ ಭೇಟಿ ನೀಡಿ ನಂತರ ನಡೆದ ರೈತ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು ಈಗಾಗಲೇ ಎರಡು ಸಲ ಟೆಂಡರ್ ಕರೆಯಲಾಗಿದ್ದು ಎರಡನೇ ಬಾರಿ ಸಮೀರವಾಡಿ ಕಾರ್ಖಾನೆಯವರ ಜೊತೆಗೆ ಮಾತುಕತೆ ನಡೆದಿದ್ದು  ಕ್ಯಾಬಿನೆಟ ಸಭೆಯ ನಂತರ ಶಾರ್ಟ ಟೆಂಡರ್ ಕರೆದು ತ್ವರಿತಗತಿಯಲ್ಲಿ ಪ್ರಾರಂಭ ಮಾಡಲು ಎಲ್ಲ ಪ್ರಯತ್ನ ನಾನು ಮಾಡುತ್ತಿದ್ದೇನೆ. 


 ಈ ನಿಟ್ಟಿನಲ್ಲಿ ಕ್ಯಾಬಿನೆಟ ಸಂದರ್ಭದಲ್ಲಿ ಮುಧೋಳದಿಂದ ರೈತರು ಹಾಗೂ ಕಾರ್ಖಾನೆ ಕಾರ್ಮಿಕರ ಜೊತೆಗೆ ಸೇರಿ ಒಂದು ನಿಯೋಗ ತೆಗೆದುಕೊಂಡು ಬನ್ನಿ ಅವರ ಜೊತೆಗೆ ನಾನು ಬರುತ್ತೇನೆ ಎಲ್ಲರೂ ಸೇರಿ ಮುಂದೆ ಆಗುವ ಎಲ್ಲ ಕಾರ್ಯದ ಬಗ್ಗೆ ಚರ್ಚೆ ಮಾಡಿ ನಿಮ್ಮೆಲರ ಆಶಯ ಹಾಗೂ ನನ್ನ ಆಶಯ ಒಂದೇ ಆಗಿರುವದರಿಂದ  ಕಾರ್ಖಾನೆಯನ್ನು ಪುನರಾರಂಭ ಮಾಡೋಣ ಎಂದು ಅವರು ಹೇಳಿದರು. 
 ರೈತ ಮುಖಂಡ ಮುತ್ತಪ್ಪ ಕೋಮಾರ, ಈರಪ್ಪ ಹಂಚನಾಳ ಮಾತನಾಡಿ ಒಟ್ಟಾರೆಯಾಗಿ ನಮ್ಮೆಲ್ಲರ  ಆಶಯ ಒಂದೆ ಕಾರ್ಖಾನೆ ಪುನರಾರಂಭವಾಗಬೇಕು. ಈ ನಿಟ್ಟಿನಲ್ಲಿ ಜು.೪ರ ನಂತರ ನಡೆಯುಬ ಕ್ಯಾಬಿನೆಟ್ ಸಭೆಯ ನಂತರ ಮತ್ತೆ ಸಭೆ ಸೇರಿ ಕಾರ್ಖಾನೆ ಆರಂಭದ ಬಗ್ಗೆ ಚರ್ಚೆ ಮಾಡೋಣ ಎಂದರು. ಸಭೆಯಲ್ಲಿ ತಹಶಿಲ್ದಾರ ವಿನೋದ ಹತ್ತಳ್ಳಿ, ಯಲ್ಲಪ್ಪ ಹೆಗಡೆ, ನಾರಾಯಣ ಯಡಹಳ್ಳಿ, ರುದ್ರಪ್ಪ ಅಡವಿ, ವೆಂಕಣ್ಣ ಗಿಡ್ಡಣ್ಣವರ, ನಾರಾಯಣ ಹವಾಲ್ದಾರ, ಸುಭಾಸ ಶಿರಬೂರ, ಅಶೋಕ ಕಿಚಡಿ, ಇದ್ದರು. ರೈತರ ಸಭೆಯ ನಂತರ ತಾಲೂಕಾಡಳಿತ ಭೌನದ ಮುಂದೆ ನಡೆಯುತ್ತಿದ್ದ  ಪ್ರತಿಭಟನೆ ತಾತ್ಕಾಲಿಕವಾಗಿ  ಸ್ಥಗಿತಗೊಳಿಸಲಾಯಿತು.