೯೫ ಕಿ.ಮೀ ಮಾನವ ಸರಪಳಿ ನಿರ್ಮಿಸಿ, ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮ

೯೫ ಕಿ.ಮೀ ಮಾನವ ಸರಪಳಿ ನಿರ್ಮಿಸಿ, ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮ
ಬಾಗಲಕೋಟೆ: ಅಂತರರಾಷ್ಟಿçÃಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸೆ.೧೫ರ ರವಿವಾರ ಜಿಲ್ಲೆಯಲ್ಲಿ ೯೫ ಕಿ.ಮೀ. ಮಾನವ ಸರಪಳಿ ನಿರ್ಮಾಣ ಮಾಡಿ ಏಕ ಕಾಲದಲ್ಲಿ ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸರಕಾರದ ನಿರ್ದೇಶನದ ಮೇರೆ ರಾಜ್ಯಾದ್ಯಂತ ಏಕಕಾಲದಲ್ಲಿ ಬೃಹತ್ ಮಾನವ ಸರಳಿ ನಿರ್ಮಾಣಕ್ಕೆ ರೂಟ್ ಮ್ಯಾಪ್ ನಿರ್ಮಿಸಿದ್ದು, ಆ ರೂಟ್ ಮ್ಯಾಪನಂತೆ ಜಿಲ್ಲೆಯಲ್ಲಿ ಆಲಮಟ್ಟಿಯಿಂದ ಸೀತಿಮನಿ ಮಾರ್ಗವಾಗಿ ಸಾಲಹಳ್ಳಿವರೆಗೆ ಒಟ್ಟು ೯೫ ಕಿ.ಮೀ ಮಾನವ ಸರಪಳಿ ನಿರ್ಮಾಣ ಮಾಡಲಾಗುತ್ತಿದೆ. ಅಂದು ಬೆಳಿಗ್ಗೆ  ೯.೩೦ ರಿಂದ ೧೦.೩೦ರವರೆಗೆ ವರೆಗೆ ಮಾನವ ಸರಪಳಿ ರಚಿಸಲು ಉದ್ದೇಶಿಸಲಾಗಿದೆ.  ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರು ಜಿಲ್ಲಾಡಳಿತ ಭವನದ ಆವರಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. 
ನಮ್ಮ ಸಂವಿಧಾನವು ಪ್ರತಿ ನಾಗರಿಕನಿಗೆ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ ಹಾಗೂ ಅಭಿವೃದ್ದಿ, ಧರ್ಮದ ಸ್ವಾತಂತ್ರö್ಯದ ಜೊತೆಗೆ ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆ ದೊರಕಿಸಿ ಕೊಟ್ಟಿದೆ. ಸಂವಿಧಾನ ಯಾವುದೇ ಒಂದು ವರ್ಗಕ್ಕೆ ಸೀಮಿತವಾಗದೇ ಭಾರತದ ಕಟ್ಟ ಕಡೆಯ ವ್ಯಕ್ತಿಯ ಸ್ವಾತಂತ್ರö್ಯ ನ್ಯಾಯ ಸಮಾನತೆಯನ್ನು ಸಾರುತ್ತದೆ. ಈ ಮಾನವ ಸರಪಳಿಯಲ್ಲಿ ಕನಿಷ್ಟ ೧.೨೫ ಲಕ್ಷ ಜನರನ್ನು ಸೇರಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ತಿಳಿಸಿದ್ದಾರೆ. 
ಈ ಮಾನವ ಸರಪಳಿಯಲ್ಲಿ ಎಲ್ಲ ಸರಕಾರಿ ಅಧಿಕಾರಿಗಳು, ಸಿಬ್ಬಂದಿಯವರು, ಶಾಲಾ ಕಾಲೇಜಿನ ಶಿಕ್ಷಕಕರು ಪ್ರಾಚಾರ್ಯರು ಹಾಗೂ ಸಹ ಸಿಬ್ಬಂದಿಯವರು ಇದಲ್ಲದೇ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಂಘ ಸಂಸ್ಥೆಗಳ ಮುಖಂಡರು, ಇತರೆ ಸಂಘ ಸಂಸ್ಥೆಯ ಮುಖಂಡರು, ಸಾರ್ವಜನಿಕರು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಮೇಲಿನ ರೂಟ್‌ನಲ್ಲಿ ತಮಗೆ ಸಮೀಪವಾಗುವ ಸ್ಥಳದಲ್ಲಿ ಮಾನವ ಸರಪಳಿಯಲ್ಲಿ ಸ್ವ-ಇಚ್ಚೆಯಿಂದ ಭಾಗವಹಿಸಬೇಕು. 
ಈ ಮಾನವ ಸರಪಳಿಯು ಬಾಗಲಕೋಟೆ ಜಿಲ್ಲೆಯಲ್ಲಿ ಆಲಮಟ್ಟಿಯಿಂದ ಪ್ರಾರಂಭವಾಗಿ ಸಾಲಹಳ್ಳಿಯವರೆಗೆ ಮುಕ್ತಾಯಗೊಳ್ಳುತ್ತದೆ. ಕನಿಷ್ಟ ೯೫ ಕಿ.ಮೀ ಈ ಸರಪಳಿಯು ಇದ್ದು, ಹಂತಹoತದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ೯ ಗಂಟೆಗೆ ಮಾನವ ಸರಪಳಿ ನಿರ್ಮಿಸಿ ಸಂವಿಧಾನ ಪೀಠಿಕೆಯನ್ನು ಓದಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. 
                          ಬಾಕ್ಸ್  
  ಮಾನವ ಸರಪಳಿ ರೂಟ್ ಮ್ಯಾಪ್ ವಿವರ
ಆಲಮಟ್ಟಿಯಿಂದ ಸೀತಿಮನಿ (೩ ಕಿ.ಮೀ), ಸೀತಿಮನಿಯಿಂದ ರಾಂಪೂರ (೪ ಕಿ.ಮೀ), ರಾಂಪೂರದಿAದ ಬಿಲ್ಲಕೆರೂರ (೪ ಕಿಮೀ), ಬಿಲ್ಲಕೆರೂರದಿಂದ ಭಗವತಿ (೧೫ ಕಿ.ಮೀ), ಭಗವತಿಯಿಂದ ಸಂಗಮಕ್ರಾಸ್ (೧೨ ಕಿ.ಮೀ), ಸಂಗಮಕ್ರಾಸ್‌ದಿoದ ಬೇವಿನಮಟ್ಟಿ (೨ ಕಿ.ಮೀ), ಬೇವಿನಮಟ್ಟಿಯಿಂದ ಶೀಗಿಕೇರಿ (೨ ಕಿ.ಮೀ), ಶೀಗಿಕೇರಿಯಿಂದ ಕದಾಂಪೂರ (೧ ಕಿ.ಮೀ), ಕದಾಂಪೂರದಿAದ ನವನಗರ, ಎಪಿಎಂಸಿ (೨ ಕಿ.ಮೀ), ನವನಗರ, ಎಪಿಎಂಸಿಯಿ0ದ ಜಿಲ್ಲಾಡಳಿತ ಭವನ (೦.೫ ಕೀ.ಮೀ), ಜಿಲ್ಲಾಡಳಿತ ಭವನದಿಂದ ವಿದ್ಯಾಗಿರಿ (೪ ಕಿ.ಮೀ), ವಿದ್ಯಾಗಿರಿಯಿಂದ ಬಿಟಿಡಿಎ(೨ ಕಿ.ಮೀ), ಬಿಟಿಡಿಎದಿಂದ ಗದ್ದನಕೇರಿ (೭ ಕಿ.ಮೀ), ಗದ್ದನಕೇರಿ ಕ್ರಾಸ್‌ದಿಂದ ತುಳಸಿಗೇರಿ (೪ ಕಿ.ಮೀ), ತುಳಸಿಗೇರಿಯಿಂದ ಕಲಾದಗಿ (೬ ಕಿ.ಮೀ), ಕಲಾದಗಿಯಿಂದ ಖಜ್ಜಿಡೋಣಿ (೮ ಕಿ.ಮೀ), ಖಜ್ಜಿಡೊಣಿಯಿಂದ ಲೋಕಾಪೂರ (೮ ಕಿ.ಮೀ) ಹಾಗೂ ಲೋಕಾಪೂರದಿಂದ ಸಾಲಹಳ್ಳಿವರೆಗೆ (೧೦ ಕಿ.ಮೀ) ಸೇರಿ ಒಟ್ಟು ೯೫ಕಿ.ಮೀವರೆಗೆ ಮಾನವ ಸರಪಳಿ ನಿರ್ಮಿಸಲಾಗುತ್ತಿದೆ.