ನವರಾತ್ರಿ: ಇಂದಿನಿ0ದ ಜಿಲ್ಲೆಯಲ್ಲಿ ನಡೆಯುವ ಕಾರ್ಯಕ್ರಮಗಳ ವಿವರ ಇಲ್ಲಿದೆ..!

ನವರಾತ್ರಿ: ಇಂದಿನಿ0ದ ಜಿಲ್ಲೆಯಲ್ಲಿ ನಡೆಯುವ ಕಾರ್ಯಕ್ರಮಗಳ ವಿವರ ಇಲ್ಲಿದೆ..!
ಬಾಗಲಕೋಟೆ: 
ಪುರಾಣದ ಐತಿಹ್ಯವುಳ್ಳ ಸೀತಿಮನಿಯೂ ಸೇರಿದಂತೆ ಜಿಲ್ಲೆಯಾದ್ಯಂತ ಅ.೩ ರಿಂದ ಅ.೧೨ರವರೆಗೆ ಅದ್ಧೂರಿ ನವರಾತ್ರಿ, ದಸರಾ ಉತ್ಸವ ಜರುಗಲಿದೆ. ಜಿಲ್ಲೆಯ ವೆಂಕಟೇಶ್ವರ ಹಾಗೂ ದೇವಿ ದೇಗುಲಗಳು ಅದಕ್ಕಾಗಿ ಸಜ್ಜಾಗಿ ನಿಂತಿದ್ದು, ಒಟ್ಟಾರೆ ಧಾರ್ಮಿಕ, ಸಾಂಸ್ಕೃತಿಕ ಉತ್ಸವಕ್ಕೆ ಜಿಲ್ಲೆ ಅಣಿಯಾಗಿದೆ. 
ಜಿಲ್ಲಾ ಕೇಂದ್ರ ಬಾಗಲಕೋಟೆ ನಗರದ ಹೊಸಪೇಟೆ, ವೆಂಕಟಪೇಟೆ ಹಾಗೂ ನವನಗರದ ಕಿಲ್ಲಾ ವೆಂಕಟೇಶ್ವರ ದೇಗುಲ, ವಿದ್ಯಾಗಿರಿ ಬಾಲಾಜಿ ಮಂದಿರಗಳಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ. ಕಿಲ್ಲಾ ಮರಾಠ ಸಮಾಜ, ನವನಗರದ ಭಾವಸಾರ ಕ್ಷತ್ರೀಯ ಸಮಾಜ, ಎಂಜಿ ರಸ್ತೆಯ ಎಸ್‌ಎಸ್‌ಕೆ ಸಮಾಜದ ಅಂಬಾಭವಾನಿ ದೇಗುಲಗಳಲ್ಲೂ ಸಿದ್ಧತೆಗಳು ಪೂರ್ಣಗೊಂಡಿದ್ದು, ದಾಂಡಿಯಾ ರಾಸ್ ಕಾರ್ಯಕ್ರಮಗಳು ಸಹ ಜರುಗಲಿವೆ. ನವನಗರದ ಕಾಳಿದಾಸ ಶಿಕ್ಷಣ ಸಂಸ್ಥೆ ಆವರಣದಲ್ಲಿ ೯ ದಿನಗಳ ಕಾಲ ಬೃಹತ್ ಪ್ರಮಾಣದ ದಾಂಡಿಯಾ ರಾಸ್ ಹಮ್ಮಿಕೊಳ್ಳಲಾಗಿದೆ. 

ಸೀತಿಮನಿಯಲ್ಲಿ ಕಾರ್ಯಕ್ರಮ:
ಅ.೩ ರಿಂದ ಅ.೧೨ ರವರೆಗೆ ಸಂಭ್ರಮದಿAದ ನವರಾತ್ರಿ ಉತ್ಸವ ನಡೆಯಲಿದೆ, ಉತ್ಸವದ ನಿಮಿತ್ತ ನಾನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಸೀತಿಮನಿಯಲ್ಲಿರುವ ಸೀತಾಚಲವಾಸ ವೆಂಕಟೇಶ್ವರ ದೇವಸ್ಥಾನದಲ್ಲಿ ೯ ದಿನದವರೆಗೆ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಸ್ವಯಂಭೂ ಮೂರ್ತಿಯಿರುವುದರಿಂದ ಈ ದೇವಸ್ಥಾನಕ್ಕೆ ವಿಶೇಷ ಐತಿಹ್ಯವಿದೆ. ದೇವಸ್ಥಾನದ ಬಳಿಯಿರುವ ಹೊಂಡಗಳನ್ನು ಲವ, ಕುಶ ಹೊಂಡಗಳೆAದು ಕರೆಯಲಾಗುತ್ತದೆ. ಸೀತೆ ಇಲ್ಲಿಗೆ ಲವ, ಕುಶರೊಂದಿಗೆ ಭೇಟಿ ನೀಡಿದ್ದಳು ಎಂದು ಪುರಾಣ ಗ್ರಂಥಗಳಲ್ಲಿ ತಿಳಿಸಲಾಗಿದೆ.ನವರಾತ್ರಿ ಅಂಗವಾಗಿ ಪ್ರತಿ ದಿನ ವೆಂಕಟೇಶ್ವರನಿಗೆ ಸುಪ್ರಭಾತ, ಕಕ್ಕಡಾರತಿ, ಪಂಚಾಮೃತ ಅಭಿಷೇಕ, ಪುಷ್ಪಾರ್ಚನೆ, ಲೋಕ ಕಲ್ಯಾಣರ್ಥವಾಗಿ ಸುದರ್ಶನ ಹೋಮ ಹಮ್ಮಿಕೊಳ್ಳಲಾಗಿದೆ. ಅ.೧೨ ರಂದು ವಿಜಯದಶಮಿ ನಿಮಿತ್ತ ಶಮಿ ವೃಕ್ಷದ ಪೂಜೆ, ಬನ್ನಿ ಮುಡಿಯುವ ಕಾರ್ಯಕ್ರಮ ನೆರವೇರಲಿದೆ. ಪ್ರತಿ ದಿನರಾಯಚೂರಿನ ಸರ್ವೋತ್ತಮ ಆಚಾರ್ಯ ಜೋಶಿ ಅವರು ಶ್ರೀ ವೆಂಕಟೇಶ ಮಹಾತ್ಮ ಪುರಾಣ ನಡೆಸಿಕೊಡಲಿದ್ದಾರೆ. ಅ.೯ ರಂದು ಲೋಕಕಲ್ಯಾಣಕ್ಕಾಗಿ ಶ್ರೀರಾಮ ತಾರಕ ಹೋಮ ಜರುಗಲಿದೆ.

  ಅ.೩ ರಂದು ಸಂಜೆ ೭.೩೦ಕ್ಕೆ ಜಗನ್ನಾಥ ಮುತ್ತತ್ತಿ ಅವರಿಂದ ಗಾಯನ,ಅ.೪ ರಂದು ಸಂಜೆ ೭ ಗಂಟೆಗೆ ಅನಘಾ ಪಾಟೀಲ, ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತ ಶಾಮ ಆಲೂರ, ಅ.೫ ರಂದು ೭.೩೦ ಗಂಟೆಗೆ ಸುನಯನಾ ದೇಶಪಾಂಡೆ, ೮.೩೦ ಗಂಟೆಗೆ ನಂದಾ ಮಿರ್ಜಿ ಸಂಗೀತ, ಅ.೬ ರಂದು ಸಂಜೆ ೬ ಗಂಟೆಗೆ ರಘೋತ್ತಮ ಆಚಾರ್ಯ ನಾಗಸಂಪಗಿ ಪ್ರವಚನ, ೭ ಗಂಟೆಗೆ ಮೈಸೂರು ರಾಮಚಂದ್ರ ಆಚಾರ್ಯರಿಂದ ಸಂಗೀತ ಸೇವೆ, ಅ.೭ ರಂದು ಸಂಜೆ ೬ ಗಂಟೆಗೆ ಕೇಶವ ಜೋಶಿ ತಂಡದಿAದ ತಬಲಾ ಸೋಲೋ, ೭ ಗಂಟೆಗೆ ಡಾ.ವಿಜಯಕುಮಾರ ಪಾಟೀಲ ಅವರಿಂದ ಸಂಗೀತ ಲಹರಿ, ಅ.೮ ರಂದು  ಸಂಜೆ ೬.೩೦ ಗಂಟೆಗೆ ಜಯರ್ತಿ ತಾಸಗಾಂವಿ ಹಾಗೂ ಪರಿಮಳಾ ಗಿರಿಯಾಚಾರ್ಯ ಅವರಿಂದ ಸಂಗೀತ ಕಾರ್ಯಕ್ರಮ, ಅ.೯ ರಂದು ಸಂಜೆ ೭ ಗಂಟೆಗೆ ಪ್ರಸಾದ ಪ್ರಭು, ೮ ಗಂಟೆಗೆ ನಾರಾಯಣ ತಾಸಗಾಂವ ಅವರಿಂದ ಸಂಗೀತ ಸೇವೆ, ಅ.೧೦ ರಂದು ಸಂಜೆ ೬ ಗಂಟೆಗೆ ಸಂತೋಷ ಗದ್ದನಕೇರಿ ಅವರಿಂದ ಸಂಗೀತ ಸೇವೆ, ಅ.೧೧ ರಂದು ಸಂಜೆ ೭ ಗಂಟೆಗೆ ಅನಂತ ಕುಲಕರ್ಣಿ ಹಾಗೂ ಮಾಳವಿಕ ಜೋಶಿ ಅವರಿಂದ ಸಂಗೀತ ಸುಧೆ ಜರುಗಲಿದೆ ಎಂದು ದೇವಸ್ಥಾನ ಸೇವಾ ಸಮಿತಿಯ ಕಾರ್ಯದರ್ಶಿ ನರಸಿಂಹ ಆಲೂರ ತಿಳಿಸಿದ್ದಾರೆ.

ವಿದ್ಯಾಗಿರಿ ಬಾಲಾಜಿ ಮಂದಿರ: 
ವಿದ್ಯಾಗಿರಿ ಬಾಲಾಜಿ ಮಂದಿರದಲ್ಲಿ ವಿವಿಧ ಕಾರ್ಯಕ್ರಮ
ಬಾಗಲಕೋಟೆ: ಚಿಕ್ಕತಿರುಪತಿ ಎಂದ್ದೇ ಖ್ಯಾತಿಗಳಿಸಿರುವ ವಿದ್ಯಾಗಿರಿಯ ಬಾಲಾಜಿ ಮಂದಿರದಲ್ಲಿ ಅ.೩ ರಿಂದ ಅ.೧೨ರವರೆಗೆ ಅದ್ಧೂರಿ ಶ್ರೀವಾರಿ ಬ್ರಹ್ಮೋತ್ಸವ ಜರುಗಲಿದೆ. 
ಪ್ರತಿದಿನ ಬೆಳಗ್ಗೆ ೬ ಗಂಟೆಗೆ ಅಭಿಷೇಕ, ೯ ಗಂಟೆಗೆ ಹೋಮ, ಸಂಜೆ ೬ ಗಂಟೆಗೆ ರಥೋತ್ಸವ ಹಾಗೂ ಕಲ್ಯಾಣೋತ್ಸವ ಕಾರ್ಯಕ್ರಮಗಳು ಜರುಗಲಿವೆ. ಸಂಜೆ ೭.೩೦ರಿಂದ ಪ್ರಸಾದದ ವ್ಯವಸ್ಥೆ ಇರಲಿದೆ ಎಂದು ಬಾಲಾಜಿ ಮಂದಿರ ಟ್ರಸ್ಟ್ ಚೇರ್ಮನ್ ದ್ವಾರಕಾದಾಸ್ ತೋಸನಿವಾಲ, ಸದಸ್ಯರಾದ ಭರತ ಭಂಗ, ವಿಷ್ಣುದಾಸ್ ಕಾಸಟ, ಶ್ಯಾಮಸುಂದರ ಭಟ್ಟಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಬಾಕ್ಸ್
ನವನಗರದಲ್ಲಿರುವ ಭಾವಸಾರ ಕ್ಷತ್ರೀಯ ಸಮಾಜದ ದೇವಸ್ಥಾನದಲ್ಲಿ ಅ.೩ರಂದು ಘಟಸ್ಥಾಪನೆ(೯ ದಿನ ದೀಪ), ಅ.೭ರ ಸೋಮವಾರ ೫ ದಿನದ ದೀಪ, ಅ.೧೦ರ ದುರ್ಗಾಷ್ಟಮಿ ದಿನ ೨ ದಿನದ ದೀಪ ಹಾಕುವುದು, ಅ.೧೧ರ ಶುಕ್ರವಾರ ಖಂಡೇ ಪೂಜೆ, ಅ.೧೨ರ ಶನಿವಾರ ವಿಜಯದಶರ್ಮಿ ಸೀಮೋಲ್ಲಂಘನೆ ಬನ್ನಿ ಮುಡಿಸುವುದು, ಅ.೧೭ರ ಗುರುವಾರ ಹುಣ್ಣಿಮೆ ಕಾರ್ಯಕ್ರಮಗಳು ಜರುಗಲಿವೆ.  ನವರಾತ್ರಿ ಸಂದರ್ಭದಲ್ಲಿ ಪ್ರತಿದಿನ ರಾತ್ರಿ ೮ಕ್ಕೆ ಶ್ರೀದೇವಿಯ ಆರತಿ ಸವಾಲು ನಡೆಯಲಿದ್ದು, ಯಾವುದೇ ಸಮಾಜದ ಬಾಂಧವರು ಭಾಗಿಯಾಗಬಹದು. ಸವಾಲಿನಲ್ಲಿ ಜಯಸಾಧಿಸುವವರು ಮರುದಿನ ದೇವಿಗೆ ನೇರ ಆರತಿ ಮಾಡಬಹುದು. ಅ.೧೨ರ ಶನಿವಾರ ಮಧ್ಯಾಹ್ನ ೩.೨೫ಕ್ಕೆ ಅಂಬಾಭವಾನಿ ಗುಡಿಯಿಂದ ಪಲ್ಲಕ್ಕಿ ಹೊರಟು, ಸೆಕ್ಟರ್ ನಂ.೨೯ರಲ್ಲಿ ಶ್ರೀಮಹಾಲಕ್ಷಿö್ಮÃ ದೇವಸ್ಥಾನ ತಲುಪಲಿದೆ. ಅಲ್ಲಿ ಬನ್ನಿ ಮುಡಿಯುವ ಕಾರ್ಯಕ್ರ ಜರುಗಲಿದೆ ಎಂದು ಶ್ರೀಅಂಬಾಭವಾನಿ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.  ಅಲ್ಲದೇ ಹಳೆ ನಗರದಿಂದ ದೇವಸ್ಥಾನಕ್ಕೆ ದರ್ಶನಕ್ಕೆ ಆಗಮಿಸುವವರಿಗಾಗಿ ಹಳೆಪೋಸ್ಟ್ ಆಫೀಸ್‌ನಿಂದ ಪ್ರತಿದಿನ ಸಂಜೆ ೭.೩೦ಕ್ಕೆ ವಾಹನ ಹೊರಡಲಿದೆ ಎಂದು ಸಮಾಜದ ಮುಖಂಡರಾದ ಸಂತೋಷ ಕರಣೆ, ವಾಸು ಝಿಂಗಾಡೆ ತಿಳಿಸಿದ್ದಾರೆ.