ನಿಮ್ಮ ಮನೆಗೂ ಬರಲಿದ್ದಾನೆ "ಏಜೆಂಟ್-೦೦೧"

 ನಿಮ್ಮ ಮನೆಗೂ ಬರಲಿದ್ದಾನೆ "ಏಜೆಂಟ್-೦೦೧"


ಬಾಗಲಕೋಟೆ: ಹಲವು ವಿಭಿನ್ನ ಪ್ರಯತ್ನಗಳ ಮೂಲಕ ಕನ್ನಡಿಗರ ಮನೆಮಾತಾಗಿರುವ ನ್ಯೂಸ್‌ಫಸ್ಟ್ ವಾಹಿನಿಯಲ್ಲಿ ಶನಿವಾರದಿಂದ ಏಜೆಂಟ್-೦೦೧ ವಿಶೇಷ ಕಾರ್ಯಕ್ರಮ ಪ್ರಸಾರವಾಗಲಿದೆ. 
 ಬೇರೆದೇಶಗಳಲ್ಲಿ ಗೂಢಚಾರಿಗಳಾಗಿದ್ದುಕೊಂಡು ದೇಶದ ಸುರಕ್ಷತೆಗೆ ಎಲೆಮರೆ ಕಾಯಿಗಳಂತೆ ಕೆಲಸ ಮಾಡಿದವರ ವಿಭಿನ್ನ ಕಥನವನ್ನು ವಿವರಿಸುವ ಕಾರ್ಯಕ್ರಮ ಇದಾಗಿದೆ. ವಾಹಿನಿಯ ಎಂಡಿ ಹಾಗೂ ಸಿಇಒ ಎಸ್.ರವಿಕುಮಾರ್ ಅವರು ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದು, ಚುನಾವಣೆ ಸಂದರ್ಭದಲ್ಲಿ ಅವರು ನಡೆಸಿದ್ದ ದಿ ಲೀಡರ್ ಕಾರ್ಯಕ್ರಮ ಜನಮನ ಗೆದ್ದಿತ್ತು. 
 ಪ್ರತಿ ಶನಿವಾರ ಸಂಜೆ ೭ಕ್ಕೆ ಹಾಗೂ ಭಾನುವಾರ ಬೆಳಗ್ಗೆ ೧೧ ಗಂಟೆಗೆ ಈ ಕಾರ್ಯಕ್ರಮ ಪ್ರಸಾರವಾಗಲಿದ್ದು, ಅತ್ಯಾಧುನಿಕ ಗ್ರಾಫಿಕ್ಸ್ ಸಹಿತ ಆಕರ್ಷಕವಾಗಿ ಕಾರ್ಯಕ್ರಮ ಮೂಡಿಬರಲಿದೆ ಎಂದು ವಾಹಿನಿ ತಿಳಿಸಿದೆ. ಚಾನಲ್‌ನ ಎಂಡಿ ಎಸ್.ರವಿಕುಮಾರ್ ಅವರು ಕಾರ್ಯಕ್ರಮಕ್ಕಾಗಿ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಅನೇಕ ಪುಸ್ತಕ ಹಾಗೂ ದಾಖಲೆಗಳ ಅಧ್ಯಯನ ನಡೆಸಿ ಮಾಹಿತಿಪೂರ್ಣ ಕಾರ್ಯಕ್ರಮವನ್ನು ಜನರ ಮುಂದಿಡುವ ಕೆಲಸ ಮಾಡಲಿದ್ದಾರೆ.