ದಾಖಲೆ ಇಲ್ಲದ ೧೦.೭೭ ಲಕ್ಷ ರೂ.ಗಳ ನಗದು ವಶ

ದಾಖಲೆ ಇಲ್ಲದ ೧೦.೭೭ ಲಕ್ಷ ರೂ.ಗಳ ನಗದು ವಶ



ಬಾಗಲಕೋಟೆ: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಡಿ ದಾಖಲೆ ಇಲ್ಲದ ೧೦.೭೭ ಲಕ್ಷ ರೂ.ಗಳ ನಗದು ಹಣವನ್ನು ನಾಯನೇಗಲಿ ಚೆಕ್‌ಪೋಸ್ಟ ತಪಾಸಣೆ ವೇಳೆ ಸೋಮವಾರ ವಶಕ್ಕೆ ಪಡೆಯಲಾಗಿದೆ.
               ಬಾಗಲಕೋಟೆ ಮತಕ್ಷೇತ್ರ ವ್ಯಾಪ್ತಿಯ ನಾಯನೇಗಲಿ ಚೆಕ್‌ಪೋಸ್ಟನ ಎಸ್‌ಎಸ್‌ಟಿ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಜಂಟಿ ಕಾರ್ಯಾಚರಣೆ ವೇಳೆಯಲ್ಲಿ ಪ್ರತ್ಯೇಕ ೫ ಪ್ರಕರಣಗಳಡಿಇ ೫ ಗೂಡ್ಸ ವಾಹನಗಳ ತಪಾಸಣೆಯಲ್ಲಿ ಒಟ್ಟು ೧೦,೭೭,೫೦೦ ರೂ.ಗಳ ನಗದು ಹಣ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ ತಿಳಿಸಿದ್ದಾರೆ.