ಮಧ್ವಮಹಾಮಂಡಲ ಅಧ್ಯಕ್ಷರಾಗಿ ಎಸ್.ಬಿ. ಸತ್ಯನಾರಾಯಣ 

ಮಧ್ವಮಹಾಮಂಡಲ ಅಧ್ಯಕ್ಷರಾಗಿ ಎಸ್.ಬಿ. ಸತ್ಯನಾರಾಯಣ 


ಬಾಗಲಕೋಟೆ: ನವನಗರದ ಶ್ರೀಕೃಷ್ಣಮಠ ಆವರಣದಲ್ಲಿರುವ ಅಖಿಲ ಭಾರತ ಮಾಧ್ವ ಮಹಾಮಂಡಲ ವಿದ್ಯಾರ್ಥಿ ನಿಲಯದ ೨೦೨೪-೨೭ನೇ ಸಾಲಿಗೆ ಪದಾಧಿಕಾರಿಗಳನ್ನು ಘೋಷಿಸಲಾಗಿದೆ. 
 ಗೌರವಾಧ್ಯಕ್ಷರಾಗಿ ಬ್ರಾಹ್ಮಣ ಸಮಾಜದ ಹಿರಿಯರಾದ ಸಿ.ಎನ್.ದಾಸ, ಅಧ್ಯಕ್ಷರಾಗಿ ಎಸ್.ಬಿ.ಸತ್ಯನಾರಾಯಣ, ಉಪಾಧ್ಯಕ್ಷರಾಗಿ ಬಾಲಕೃಷ್ಣ ಮಾರ್ಕೋಡ, ನರಸಿಂಹ ಆಲೂರ, ಡಾ.ಗಿರೀಶ ಮಸೂರಕರ ಅವರನ್ನು ಆಯ್ಕೆ ಮಾಡಲಾಗಿದೆ. 
 ಕಾರ್ಯದರ್ಶಿಯಾಗಿ ಡಾ.ಕೆ.ರಾಘವೇಂದ್ರರಾವ್, ಸಹಕಾರ್ಯದರ್ಶಿಯಾಗಿ ಪ್ರದೀಪ ಪರ್ವತಿಕರ, ಕೋಶಾಧ್ಯಕ್ಷರಾಗಿ  ಗಿರೀಶ ಉಡುಪಿ, ಕಾರ್ಯಕಾರಿಣಿ ಸದಸ್ಯರಾಗಿ ಗೋಪಾಲ ಜಂಬಗಿ, ಲಕ್ಷ್ಮೀನಾರಾಯಣ ತಂತ್ರಿ, ಕೆ.ವೆಂಕಟೇಶರಾವ್, ಪ್ರಸಾದ ಕಾರಂತ, ವಿನಾಯಕ ತಾಳಿಕೋಟಿ, ಭಾಸ್ಕರ ಮನಗೂಳಿ, ಕೃಷ್ಣಾ ಅಥಣಿ ಅವರನ್ನು ಆಯ್ಕೆ ಮಾಡಲಾಗಿದೆ.  
 ಮಹಾಮಂಡಲದ ಕೇಂದ್ರ ಘಟಕದ ಅಧ್ಯಕ್ಷ ಎಚ್.ವಿ.ಗೌತಮ, ಪ್ರಧಾನ ಕಾರ್ಯದರ್ಶಿ ಶ್ರೀಪಾದ ಸಿಂಗನಮಲ್ಲಿ, ಕೋಶಾಧ್ಯಕ್ಷ ವಿ.ಕೆ.ಹರಿದಾಸ ಅವರುಗಳು ಶಾಶ್ವತ ಆಹ್ವಾನಿತರಾಗಿರಲಿದ್ದಾರೆ.  ಮಹಾಮಂಡಲದ ಕೇಂದ್ರ ಘಟಕದ ಕಾರ್ಯದರ್ಶಿ ಎನ್.ಎಸ್.ದ್ವಾರಕನಾಥ ಅವರು ಈ ಆಯ್ಕೆಗಳನ್ನು ಘೋಷಿಸಿದ್ದಾರೆ.